ಶುಕ್ರವಾರ, ಆಗಸ್ಟ್ 12, 2022
22 °C

ಬೀದರ್‌: ವಾಯುಪಡೆ ಕೇಂದ್ರದ ಮುಖ್ಯಸ್ಥರಾಗಿ ಸಮೀರ್ ಸೊಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಇಲ್ಲಿಯ ವಾಯುಪಡೆ ಕೇಂದ್ರದ ಮುಖ್ಯಸ್ಥರಾಗಿ ಏರ್ ಕಮೊಡೋರ್ ಸಮೀರ್ ಸೊಂಧಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಏರ್ ಕಮೊಡೋರ್ ನಿಖಿಲೇಶ್ ಗೌತಮ ಅವರು ಸೊಂಧಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ‘ಬೀದರ್‌ ವಾಯುಪಡೆ ಕೇಂದ್ರ ದೇಶದ ಶ್ರೇಷ್ಠ ತರಬೇತಿ ಕೇಂದ್ರಗಳಲ್ಲಿ ಗುರುತಿಸಿಕೊಂಡಿದೆ. ವಾಯು ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರ ವೃತ್ತಿ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು’ ಎಂದು ಹೇಳಿದರು.

ಸಮೀರ್ ಸೊಂಧಿ ಅವರು ವಾಯು ಪಡೆಯ ಯುದ್ಧ ವಿಮಾನ ವಿಭಾಗದಲ್ಲಿ 1993ರಲ್ಲಿ ಸೇವೆ ಆರಂಭಿಸಿದರು. ಅವರಿಗೆ ಮಿರಾಜ್, ಬೈಸನ್, ಜಾಗ್ವರ್, ಕಿರಣ್ ಮೊದಲಾದ ಯುದ್ಧ ವಿಮಾನಗಳಲ್ಲಿ 3,200 ಗಂಟೆಗಳ ಹೊತ್ತು ಹಾರಾಟ ಮಾಡಿದ ಅನುಭವ ಇದೆ. ಅವರು ಯುದ್ಧ ವಿಮಾನದ ತಂಡವೊಂದರ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಾಯು ಪಡೆ ತರಬೇತಿ ಹಾಗೂ ಶಿಕ್ಷಣ ವಿಭಾಗದಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು