ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನವಾಡ | ಸಂಕಷ್ಟ ಚತುರ್ಥಿ: ಗಣೇಶನಿಗೆ ವಿಶೇಷ ಪೂಜೆ

Published 25 ಜೂನ್ 2024, 14:07 IST
Last Updated 25 ಜೂನ್ 2024, 14:07 IST
ಅಕ್ಷರ ಗಾತ್ರ

ಬಾವಗಿ(ಜನವಾಡ): ಸಂಕಷ್ಟ ಚತುರ್ಥಿ ನಿಮಿತ್ತ ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದ ಗಣೇಶ ಮಂದಿರದಲ್ಲಿ ಮಂಗಳವಾರ ವಿಘ್ನ ನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಗಣೇಶ ಮೂರ್ತಿಗೆ ಕುಂಭಾಭಿಷೇಕ ಮಾಡಿ ಭಕ್ತಿ ಸಮರ್ಪಿಸಿದರು. ವಿಶ್ವ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

ಭದ್ರೇಶ್ವರ ಮಠದ ಶಿವಕುಮಾರ ಸ್ವಾಮೀಜಿ, ಗ್ರಾ.ಪಂ ಅಧ್ಯಕ್ಷ ಶಾಂತವೀರ ಹಜ್ಜರಗಿ, ಸಂಗಮೇಶ ಹಜ್ಜರಗಿ, ಚನ್ನಮಲ್ಲಪ್ಪ ಹಜ್ಜರಗಿ, ರೇವಣಪ್ಪ ಭದ್ರಣ್ಣ, ಶಿವಕುಮಾರ ರಿಶೆಟ್ಟಿ, ರಾಜಕುಮಾರ ಪಾಟೀಲ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT