ಭಾನುವಾರ, ಜನವರಿ 17, 2021
20 °C

ಸಾಠೆ ಭಾವಚಿತ್ರದ ನಾಮಫಲಕ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ಖತಗಾಂವ್ ಕ್ರಾಸ್ ಹತ್ತಿರ ಲೋಕಶಾಹಿ ಅಣ್ಣಾ ಭಾವುಸಾಠೆ ವೃತ್ತದಲ್ಲಿನ ಅಣ್ಣಾಭಾವು ಸಾಠೆ ಅವರ ಭಾವಚಿತ್ರ ಹೊಂದಿದ ಫಲಕ ಮತ್ತು ಅದರ ಕಬ್ಬಿಣದ ಪೈಪ್‌ನ್ನು ಕಿಡಿಗೇಡಿಗಳು ಕಳವು ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘ ತಾಲ್ಲೂಕು ಘಟಕ ವತಿಯಿಂದ ನಿಲೇಶ ಘಾಗರೆ ಅವರು ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿಎಸ್‍ಐ ತಾನಾಜಿ ಬೆಳಕಟ್ಟೆ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

‘ಅಣ್ಣಾ ಭಾವು ಸಾಠೆ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. 24 ಗಂಟೆ ಒಳಗೆ ಅವರ ಭಾವಚಿತ್ರ ಅಳವಡಿಸಬೇಕು. ಇಲ್ಲದಿದ್ದರೆ, ಹೋರಾಟ ಮಾಡಲಾಗುವುದು’ ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.