ಶನಿವಾರ, ಜನವರಿ 18, 2020
21 °C

ಬೀದರ್‌: ಎಸ್‍ಬಿಐ ಸಾಲ ಮೇಳಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಭಾರತೀಯ ಸ್ಟೇಟ್ ಬ್ಯಾಂಕ್‍ನ ಅಂಬೇಡ್ಕರ್ ವೃತ್ತ ಬಳಿಯ ಶಾಖೆಯ ಆವರಣದಲ್ಲಿ ಶುಕ್ರವಾರ ಗೃಹ ಸಾಲ ಮೇಳಕ್ಕೆ ಚಾಲನೆ ನೀಡಲಾಯಿತು.

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿ ಡಾ.ಸಿ.ವಿ.ರಾಜು ಕಾರ್ಯಕ್ರಮ ಉದ್ಘಾಟಿಸಿದರು.

‘ಮನೆ ನಿರ್ಮಾಣ, ನಿವೇಶನ ಖರೀದಿಗೆ ಎಸ್‌ಬಿಐ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತಿದೆ. ವಾಹನ ಖರೀದಿಗೂ ಸಾಲ ಕೊಡುತ್ತಿದೆ. ಗ್ರಾಹಕರು ಇದರ ಲಾಭ ಪಡೆಯಬೇಕು’ ಎಂದು ತಿಳಿಸಿದರು.

ಎಸ್‍ಬಿಐ ಬೀದರ್ ಪ್ರಾದೇಶಿಕ ವ್ಯವಸ್ಥಾಪಕ ಕೆ.ಆರ್.ಶ್ರೀರಾಮ ಇದ್ದರು. ಪ್ರಧಾನ ವ್ಯವಸ್ಥಾಪಕ ಕೆ.ನಾಗರಾಜ್, ಚಂದ್ರಶೇಖರನ್ ಇದ್ದರು.

ರಮೇಶ ಸಿಂಧೆ ನಿರೂಪಿಸಿದರು. ಉಮೇಶ ಜಾಧವ್ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು