ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಆಡು ಸಾಕಾಣಿಕೆ ತರಬೇತಿ 27ರಿಂದ

Last Updated 25 ಫೆಬ್ರುವರಿ 2023, 10:37 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಫೆ. 27 ರಿಂದ ಮಾರ್ಚ್ 1 ರ ವರೆಗೆ ವೈಜ್ಞಾನಿಕ ಆಡು ಸಾಕಾಣಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ.

ಮೂರೂ ದಿನ ಬೆಳಿಗ್ಗೆ 10.30 ರಿಂದ ಸಂಜೆ 4.30 ರ ವರೆಗೆ ತರಬೇತಿ ನಡೆಯಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ತಿಳಿಸಿದ್ದಾರೆ.

ರೈತರ ಆದಾಯ ಹೆಚ್ಚಿಸಲು ಹಾಗೂ ಆಡು ಸಾಕಾಣಿಕೆ ಲಾಭದಾಯಕವಾಗಿಸಲು ತರಬೇತಿ ಹಮ್ಮಿಕೊಳ್ಳಲಾಗಿದೆ. ಆಡು ಉದ್ಯಮದಲ್ಲಿನ ಬದಲಾವಣೆ, ಸಮಗ್ರ ಕೃಷಿ ಪದ್ಧತಿಯಲ್ಲಿ ಆಡು ಸಾಕಾಣಿಕೆ ಮಹತ್ವ, ಸಮತೋಲನ ಆಹಾರ ನಿರ್ವಹಣೆ, ಮೇವಿನ ಬೆಳೆ ಉತ್ಪಾದನೆ, ಅಜೋಲ್ಲಾ ಹಾಗೂ ಲಸಿಕೆ ಪ್ರಾಮುಖ್ಯತೆ ಕುರಿತು ತಜ್ಞ ವಿಜ್ಞಾನಿಗಳು ಹಾಗೂ ಅನುಭವಿ ರೈತರು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಆಸಕ್ತ ರೈತರು ಕೃಷಿ ವಿಜ್ಞಾನಿ ಅಕ್ಷಯಕುಮಾರ (ಮೊ: 8147505715) ಅವರ ಬಳಿ ಹೆಸು ನೋಂದಾಯಿಸಬಹುದು ಎಂದು ತಿಳಿಸಿದ್ದಾರೆ.

ಸಂವಾದ 28 ರಂದು
ನಗರದ ಹಬ್ಸಿಕೋಟ್ ಅತಿಥಿ ಗೃಹ ರಸ್ತೆಯಲ್ಲಿ ಇರುವ ಗವಿ ದೇವಾಲಯದಲ್ಲಿ ಫೆ. 28 ರಂದು ಬೆಳಿಗ್ಗೆ 11ಕ್ಕೆ ರಾಜ್ಯ ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆನಡಿ ಶಾಂತಕುಮಾರ ಅವರೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿದೆ.
ಪಾಸ್ಟರೇಟ್ ಕಮಿಟಿಯ ಸದಸ್ಯರು, ಸಭೆಯ ಹಿರಿಯ ಸದಸ್ಯರು ಹಾಗೂ ಸಮಾಜದ ಹಿತ ಚಿಂತಕರು ಸಂವಾದದಲ್ಲಿ ಪಾಲ್ಗೊಳ್ಳಬೇಕು ಎಂದು ಸಂವಾದದ ಸಂಯೋಜಕ ಡಾ. ಅಣ್ಣಾರಾವ್ ನಾವದಗೇರಿ ಮನವಿ ಮಾಡಿದ್ದಾರೆ.

* * *
ಹಡಪದ ಸಮಾಜ ಅಭಿವೃದ್ಧಿಗೆ ಅನುಕೂಲ
ಬೀದರ್: ರಾಜ್ಯ ಸರ್ಕಾರ ಸ್ಥಾಪಿಸಿರುವ ಕರ್ನಾಟಕ ಹಡಪದ ಅಭಿವೃದ್ಧಿ ನಿಗಮದಿಂದ ಹಡಪದರ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.
ಹಡಪದ ಸಮುದಾಯಕ್ಕೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಕೊಡಲಾಗಿದೆ. ನಿಗಮವು ಸಮುದಾಯದ ಆರ್ಥಿಕ ಏಳಿಗೆಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT