ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರು, ಮುಸ್ಲಿಮರಿಗಿದೆ ಇತಿಹಾಸ ಸೃಷ್ಟಿಸುವ ಸಾಮರ್ಥ್ಯ: ಓವೈಸಿ

ಶೋಷಿತರ ಐಕ್ಯತಾ ಸಮಾವೇಶ
Last Updated 27 ಜನವರಿ 2021, 2:47 IST
ಅಕ್ಷರ ಗಾತ್ರ

ಬೀದರ್: ‘ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಪರಿಶಿಷ್ಟರು, ಮುಸ್ಲಿಮರಿಗೆ ಇತಿಹಾಸ ಸೃಷ್ಟಿಸುವ ಸಾಮರ್ಥ್ಯ ಇದೆ. ದಲಿತರು ಹಾಗೂ ಅಲ್ಪಸಂಖ್ಯಾತರು ಒಗ್ಗೂಡಿದರೆ ದೇಶದ ಇತಿಹಾಸವೇ ಬದಲಾಗಲಿದೆ’ ಎಂದು ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಅಭಿಪ್ರಾಯಪಟ್ಟರು.

72ನೇ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೀಯ ಭಾವೈಕ್ಯತೆ ಮತ್ತು ಭ್ರಾತೃತ್ವ ವೇದಿಕೆ ವತಿಯಿಂದ ನಗರದ ಹೊರವಲಯದಲ್ಲಿರುವ ರಾಯಲ್ ಫಂಕ್ಷನ್‌ ಹಾಲ್‌ನಲ್ಲಿ ಆಯೋಜಿಸಿದ್ದ ಶೋಷಿತರ ಐಕ್ಯತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಸಂವಿಧಾನವು ರಾಜಕೀಯ ವನ್ನು ನಿಯಂತ್ರಿಸಬಹುದಾದ ಪವಿತ್ರ ವಾದ ಮತದಾನದ ಹಕ್ಕು ಕೊಟ್ಟಿದೆ. ಅದನ್ನು ಚುನಾವಣೆಯ ಸಂದರ್ಭದಲ್ಲಿ ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಕರೆ ನೀಡಿದರು.

‘ಭಾರತದ ಸಂವಿಧಾನ ಮಾನ ವತೆಯ ಸಂವಿಧಾನವಾಗಿದೆ. ಬಿ.ಆರ್‌.ಅಂಬೇಡ್ಕರ್‌ ಎಲ್ಲ ಜನಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚಿಸಿದ್ದಾರೆ. ಶೋಷಿತರು ಸಾಮಾಜಿಕ ಹಾಗೂ ರಾಜಕೀಯವಾಗಿ ಮುಂದೆ ಮೀಸಲಾತಿಯನ್ನು ಕಲ್ಪಿಸಿದ್ದಾರೆ. ದಲಿತರು ಅದರ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.

‘ಪ್ರತಿಯೊಬ್ಬರು ದೇಶದ ಪವಿತ್ರ ಸಂವಿಧಾನದ ಬಗ್ಗೆ ಆಳವಾಗಿ ಅರಿತುಕೊಳ್ಳಬೇಕು’ ಎಂದು ತಿಳಿಸಿದರು.

ರಾಷ್ಟ್ರೀಯ ಭಾವೈಕ್ಯತೆ ಮತ್ತು ಭ್ರಾತೃತ್ವ ವೇದಿಕೆಯ ಅಧ್ಯಕ್ಷ ಉಮೇಶಕುಮಾರ ಸ್ವಾರಳ್ಳಿಕರ್, ವೇದಿಕೆಯ ಗೌರವಾಧ್ಯಕ್ಷ ಸೈಯದ್ ವಹಿದ್ ಲಖನ್, ಕಾರ್ಯಾಧ್ಯಕ್ಷ ಅಭಿ ಕಾಳೆ, ಪ್ರಧಾನ ಕಾರ್ಯದರ್ಶಿ ಸಂದೀಪ ಕಾಂಟೆ, ಮುಖಂಡರಾದ ರಾಜಕುಮಾರ ಮೂಲಭಾರತಿ, ರವಿಕುಮಾರ ವಾಘಮಾರೆ, ಚಂದ್ರಕಾಂತ ನಿರಾಟೆ, ಓಂಪ್ರಕಾಶ ಭಾವಿಕಟ್ಟಿ, ನರಸಿಂಗ್ ಸಾಮ್ರಾಟ್, ಮಲ್ಲಿಕಾರ್ಜುನ ಚಿಟ್ಟಾ, ಖಂಡಪ್ಪ ಪಾತರಪಳ್ಳಿ, ರಾಜಕುಮಾರ ಸೋನಿ, ಸಂತೋಷ ಏಣಕೂರ, ಪ್ರಕಾಶ ಬಲಾಂಡೆ, ಕಲ್ಲಪ್ಪ ಬಂದಗೆ, ಸಿದ್ಧಾರ್ಥ ಲಾಮಳೆ, ಮಹಮ್ಮದ್‌ ಖಾದ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT