ಮಂಗಳವಾರ, ಆಗಸ್ಟ್ 3, 2021
23 °C

ಆರು ಮೃತರಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲೆಯಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಪುರುಷರು ಕೋವಿಡ್ 19 ಸೋಂಕಿನಿಂದ ಮೃತಪಟ್ಟಿರುವುದು ಶುಕ್ರವಾರ ಪ್ರಕಟವಾದ ವೈದ್ಯಕೀಯ ವರದಿಯಿಂದ ಬಹಿರಂಗವಾಗಿದೆ.

55 ವರ್ಷದ ವ್ಯಕ್ತಿ ಜೂನ್‌ 28 ರಂದು ಮನೆಯಲ್ಲೇ ಮೃತಪಟ್ಟಿದ್ದಾರೆ. ಇವರು ಎಲ್ಲೆಲ್ಲಿ ಪ್ರವಾಸ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಮಹಾರಾಷ್ಟ್ರದ ಲಾತೂರ್‌ನಿಂದ ಜಿಲ್ಲೆಗೆ ಮರಳಿದ್ದ 24 ವರ್ಷದ ಮಹಿಳೆ ಸಂಧಿವಾತದಿಂದ ಜೂನ್‌ 25 ರಂದು ಹಾಗೂ 50 ವರ್ಷದ ಪುರುಷ ಕ್ಷಯರೋಗದಿಂದ ಜೂನ್‌ 27ರಂದು ಸಾವಿಗೀಡಾಗಿದ್ದಾರೆ.

70 ವರ್ಷದ ಪುರುಷ ಉಸಿರಾಟ ತೊಂದರೆ ಹಾಗೂ ಮಧುಮೇಹದಿಂದ ಜುಲೈ 2 ರಂದು ಕೊನೆಯುಸಿರೆಳೆದಿದ್ದಾರೆ.

70 ವರ್ಷದ ಮಹಿಳೆ ತೀವ್ರ ಉಸಿರಾಟದ ಸೋಂಕಿನಿಂದ ಮೃತಪಟ್ಟಿದ್ದಾರೆ. 31 ವರ್ಷದ ಯುವಕ ಜೂನ್‌ 27 ರಂದು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.

‘ಮೃತ ಎಲ್ಲ ಆರು ವ್ಯಕ್ತಿಗಳ ಗಂಟಲು ಮಾದರಿ ಪಡೆದು ಬ್ರಿಮ್ಸ್‌ ಕೋವಿಡ್‌ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇವರೆಲ್ಲರ ವರದಿ ಶನಿವಾರ ಪಾಸಿಟಿವ್‌ ಬಂದಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು