ಶುಕ್ರವಾರ, ಜನವರಿ 27, 2023
27 °C

ಮಣ್ಣು ಬದುಕಿನ ಜೀವನಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ‘ಮಣ್ಣು ಎಲ್ಲರ ಬದುಕಿನ ಜೀವನಾಡಿ. ಮಣ್ಣಿನ ಸಂರಕ್ಷಣೆಯಿಂದ ಸಕಲ ಜೀವರಾಶಿಗಳ ಉಳಿವು ಸಾಧ್ಯ’ ಎಂದು ಬೀದರ್‌ ತೋಟಗಾರಿಕೆ ವಿಸ್ತರಣಾ ಘಟಕದ ಮುಂದಾಳು ಶ್ರೀನಿವಾಸ್‌.ಎನ್‌ ಅವರು ತಿಳಿಸಿದರು.

ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಬೀದರ್‌ನ ತೋಟಗಾರಿಕೆ ವಿಸ್ತರಣಾ ಘಟಕ ಮತ್ತು ಬೀದರ್‌ನ ಕ್ರಿಯಾಜೆನ್‌ ಅಗ್ರಿ ಕಂಪನಿ ಸಹಯೋಗದಲ್ಲಿ ನಡೆದ ಮಣ್ಣು-ಆಹಾರದ ಕುರಿತ ರೈತರ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಎರೆಹುಳುಗಳ ಸಂಖ್ಯೆ ಹೆಚ್ಚಾಗಿ ಬೆಳೆಗಳಿಗೆ ಹೆಚ್ಚಿನ ಪೌಷ್ಟಿಕಾಂಶ ಲಭಿಸುತ್ತದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ.ಎಸ್.ವಿ.ಪಾಟೀಲ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಪ್ರವೀಣ ನಾಯಿಕೊಡಿ ಮಾತನಾಡಿದರು.

ಪ್ರಶಾಂತ ರಡ್ಡಿ, ಡಾ.ಎಂ.ಡಿ.ಫಾರೂಕ್‌, ಡಾ.ಅರುಣ ಕುಮಾರ್‌, ಕೃಷಿ ಅಧಿಕಾರಿ ನೀಲಾಂಬಿಕಾ, ಮಾರುತಿ, ರೈತರಾದ ಶಂಕರರಾವ್‌ ಪಾಟೀಲ, ಯಾಮಾರಡ್ಡಿ, ಶರಣು ಕಾಶೆಂಪೂರ, ಸುನೀಲ ರಡ್ಡಿ ಹಾಗೂ ದೀಪಕ್ ರಡ್ಡಿ ಇದ್ದರು. ಡಾ.ಎ.ಜಿ.ಪಾಟೀಲ ಸ್ವಾಗತಿಸಿದರು. ಡಾ.ಪ್ರಶಾಂತ್‌ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು