ಭಾಲ್ಕಿ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಗಳಿಸಿದ್ದ ಪಟ್ಟಣದ ಸೂರ್ಯೋದಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ದೇವಿ ಮಲ್ಲಿಕಾರ್ಜುನ ಸೀತಾ ಅವರು ಮರು ಮೌಲ್ಯಮಾಪನದ ಬಳಿಕ 3ನೇ ರ್ಯಾಂಕ್ ಪಡೆದಿದ್ದಾರೆ.

ದೇವಿ ಅವರು ಮೊದಲು ಶೇ99.36 ರಷ್ಟು ಅಂಕ ಗಳಿಸಿದ್ದರು. ಅವರಿಗೆ ಹಿಂದಿ ವಿಷಯದಲ್ಲಿ 98 ಅಂಕಗಳು ಬಂದಿದ್ದವು. ಮರು ಮೌಲ್ಯಮಾಪನದಲ್ಲಿ 2 ಅಂಕ ಹೆಚ್ಚಾಗಿ 100ಕ್ಕೆ 100 ಅಂಕ ಪಡೆದಿದ್ದಾರೆ. ವಿದ್ಯಾರ್ಥಿನಿಯ ಒಟ್ಟು ಫಲಿತಾಂಶ ಶೇ99.68ಕ್ಕೆ ಏರಿಕೆಯಾಗಿದ್ದು ರ್ಯಾಂಕ್ನಲ್ಲೂ ಎರಡು ಸ್ಥಾನ ಮೇಲಕ್ಕೆ ಏರಿದ್ದಾರೆ.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದೇವಿ 625 ಅಂಕಗಳ ಪೈಕಿ 623 ಅಂಕ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ. ಫಲಿತಾಂಶದಲ್ಲಿ ಶಾಲೆ ಸತತ ಎರಡನೇ ವರ್ಷವೂ ಕಲಬುರಗಿ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಶಾಲೆಯ ಅಧ್ಯಕ್ಷ ಸಂತೋಷ ಖಂಡ್ರೆ ತಿಳಿಸಿದ್ದಾರೆ.

ದೇವಿ ಅವರ ಸಾಧನೆಗೆ ಸಂತೋಷ ಖಂಡ್ರೆ, ಶಾಲೆಯ ಕಾರ್ಯದರ್ಶಿ ಉಷಾ ಖಂಡ್ರೆ, ಪ್ರಾಚಾರ್ಯ ಅನಿಲ್ ಪಾಟೀಲ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.