ಶನಿವಾರ, ಜುಲೈ 2, 2022
22 °C

ಸುವಿತ್ ಮೋರೆ ಸೇರಿ ಮೂವರಿಗೆ ರಾಜ್ಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಜಿಲ್ಲೆಯ ಸುವಿತ್ ಸೂರ್ಯಕಾಂತ ಮೋರೆ ಸೇರಿ ಮೂವರಿಗೆ ಕರ್ನಾಟಕ ಯೂತ್ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ಕೊಡಲಾಗುವ ಕ್ರೀಡಾರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ.

ಯೋಗೇಶ್ವರಿ ಸ್ವಾಮಿ ಹಾಗೂ ಮಣಿರತ್ನ ಮಲ್ಲಿಕಾರ್ಜುನ ಮನ್ನಳ್ಳಿ ಪ್ರಶಸ್ತಿಗೆ ಭಾಜನರಾದ ಇತರ ಇಬ್ಬರು.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಭಿನವ ಶ್ರೀಕಂಠ ಸ್ವಾಮೀಜಿ, ಡಾ.ಜಿ.ಸದಾನಂದ ಸ್ವಾಮಿ, ಅಸೋಸಿಯೇಷನ್ ಸಂಸ್ಥಾಪಕ ಡಾ.ಎ.ಪಿ.ಶ್ರೀನಾಥ ಹಾಗೂ ಕಾರ್ಯದರ್ಶಿ ಬಾಬು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.