ಭಾನುವಾರ, ಮಾರ್ಚ್ 26, 2023
23 °C
ಭಾಲ್ಕಿ ತಾಲ್ಲೂಕಿನ ಕದಲಾಬಾದ ಗ್ರಾಮದಲ್ಲಿ ಮಡುಗಟ್ಟಿದ ದುಃಖ

ಉಕ್ರೇನ್‌ನಲ್ಲಿ ವಿದ್ಯಾರ್ಥಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ (ಬೀದರ್ ಜಿಲ್ಲೆ): ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್‍ಗೆ ತೆರಳಿದ್ದ ತಾಲ್ಲೂಕಿನ ಕದಲಾ ಬಾದ್‌ ಗ್ರಾಮದ ಅಮರ್‌ ಬಿರಾದಾರ (20) ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ತಂದೆ ಶಾಲಿವಾನ ಬಿರಾದಾರ, ತಾಯಿ ರೂಪಾ ಮತ್ತು ತಂಗಿ ಇದ್ದಾರೆ.

ಹೈದರಾಬಾದ್‍ನ ಏಜೆಂಟ್ ಒಬ್ಬರ ಮೂಲಕ ಅಮರ್‌ ವರ್ಷದ ಹಿಂದೆ ಉಕ್ರೇನ್‍ಗೆ ತೆರಳಿ, ಖಾರಕಿವ್ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು.ಕಾಲೇಜಿನ ವಸತಿ ನಿಲಯದಲ್ಲಿದ್ದ ಅವರು, ನಂತರ ಲಾಕ್‍ಡೌನ್ ಕಾರಣ ಫ್ಲ್ಯಾಟ್‌ವೊಂದರಲ್ಲಿ ಉಳಿದಿದ್ದರು. ಆಗಸ್ಟ್ 28ರಂದು ಪೋಷಕರ ಜೊತೆ ಮಾತನಾಡಿ, ‘ಅಂತರರಾಷ್ಟ್ರೀಯ ವಿಮಾನ ಸೇವೆ ಆರಂಭಗೊಂಡ ಬಳಿಕ ಮನೆಗೆ ಬರುವೆ’ ಎಂದಿದ್ದರು.

ಫ್ಲ್ಯಾಟ್‌ನ ಏಳನೇ ಮಹಡಿಯಿಂದ ಕೆಳಗಡೆ ಬಿದ್ದು ಅಮರ್‌ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು