ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಆಳ ಅಧ್ಯಯನದಿಂದ ವಿಷಯ ಗ್ರಹಿಕೆ ಸಾಧ್ಯ’

ಜ್ಞಾನಗಂಗಾ ಶಾಲೆ ಕಲಿಕಾ ಮೇಳ ವಾರ್ಷಿಕೋತ್ಸವ ಉದ್ಘಾಟನೆ
Published 15 ಫೆಬ್ರುವರಿ 2024, 13:51 IST
Last Updated 15 ಫೆಬ್ರುವರಿ 2024, 13:51 IST
ಅಕ್ಷರ ಗಾತ್ರ

ಚಿಟಗುಪ್ಪ: ‘ಶಿಕ್ಷಕರು ವಿದ್ಯಾರ್ಥಿಗಳಿಗೆ ಆಳವಾದ ಅಧ್ಯಯನ ಮಾಡಲು ಪ್ರೇರಣೆ ನೀಡಬೇಕು ಇದರಿಂದ ಅವರು ವಿಷಯ ವಸ್ತು ಗ್ರಹಿಸುವ ಸಾಮರ್ಥ್ಯ ಪಡೆಯುತ್ತಾರೆʼ ಎಂದು ಕಾಂಗ್ರೆಸ್‌ ಮುಖಂಡ ರಾಜಶೇಖರ ಪಾಟೀಲ ಹೇಳಿದರು.

ಇಲ್ಲಿಯ ಜ್ಞಾನಗಂಗಾ ಶಾಲೆಯಲ್ಲಿ ನಡೆದ ಕಲಿಕಾ ಮೇಳ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಅನುದಾನ ರಹಿತ ಶಾಲೆಗಳ ನಿರ್ವಹಣೆ ಪ್ರಸ್ತುತ ವ್ಯವಸ್ಥೆಯಲ್ಲಿ ದುಬಾರಿಯಾಗಿದ್ದು, ಜ್ಞಾನಗಂಗಾ ಶಾಲೆ ಆಡಳಿತ ಮಂಡಳಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ, ಸರ್ಕಾರದಲ್ಲೂ ಅನುದಾನ ರಹಿತ ಶಾಲೆಗಳಿಗೆ ಆಸರೆಯಾಗುವ ಯೋಜನೆಗಳು ರೂಪುಗೊಳ್ಳಬೇಕಿದ್ದು ಚಿಂತಕರು ಮೇಲಿನ ಮಟ್ಟದ ಅಧಿಕಾರಿಗಳು ಕಣ್ಣು ತೆರೆಸುವ ಕೆಲಸ ಮಾಡಬೇಕು ಎಂದರು.

ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜ್ಞಾನಗಂಗಾ ಶಾಲೆ ಅಧ್ಯಕ್ಷ ಸುರೇಶ್‌ ಚೌದ್ರಿ, ಪದಾಧಿಕಾರಿಗಳಾದ ಮಾಹದೇವ ಹಿರಾಸ್ಕರ್‌, ಕಲ್ಪನಾ, ಶಾರದಾ, ಗಣ್ಯರಾದ ಶಂಕರರಾವ್‌ ಕುಲಕರ್ಣಿ, ದಿಲೀಪಕುಮಾರ ಬಗ್ದಲಕರ್‌, ಉಪೇಂದ್ರ ಪಾಟೀಲ, ರಮೇಶ್‌ ಪಾರಾ, ಬಾಬಾ, ಮನೋಜ್‌ ಶರ್ಮಾ, ನಸೀರ್‌ ಖಾನಸಾಬ್‌, ಇರ್ಫಾನ್‌ ಬುಖಾರಿ, ವಿಠಲರಾವ್‌ ಪಟ್ಟಣಕರ್‌, ಗುಂಡುರಡ್ಡಿ, ಮಾಣಿಕಪ್ಪ ಹಿಪ್ಪರಗಿ, ವಿಜಯಕುಮಾರ ಕಲ್ಲೂರ್‌, ಕಿರಣ ಹಿಮಾಲಪುರಕರ್‌, ವಸಂತ ಬೆನಕಪಳ್ಳಿ, ಮನೋಜ್‌ ಟೆಕಿಕರ್‌, ಪಾಲಕರು ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT