ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಅಧ್ಯಯನ ಪ್ರವೃತ್ತಿ ಬೆಳೆಯಲಿ; ಅನಂತ ಬಿರಾದಾರ

Last Updated 20 ಏಪ್ರಿಲ್ 2022, 4:56 IST
ಅಕ್ಷರ ಗಾತ್ರ

ಜನವಾಡ: ಮಕ್ಕಳಲ್ಲಿ ಅಧ್ಯಯನ ಪ್ರವೃತ್ತಿ ಬೆಳೆಯಬೇಕು ಎಂದು ಸೂರ್ಯ ಫೌಂಡೇಷನ್ ರಾಷ್ಟ್ರೀಯ ಉಪಾಧ್ಯಕ್ಷ ಅನಂತ ಬಿರಾದಾರ ಹೇಳಿದರು.

ಬೀದರ್ ತಾಲ್ಲೂಕಿನ ಆಣದೂರು ಗ್ರಾಮದಲ್ಲಿ ಸೂರ್ಯ ಫೌಂಡೇಷನ್, ಮಾತೃಭೂಮಿ ಸೇವಾ ಪ್ರತಿಷ್ಠಾನ ಹಾಗೂ ಗ್ರಾಮ ವಿಕಾಸ, ಶಿಕ್ಷಣ ಮತ್ತು ದತ್ತಿ ಪ್ರತಿಷ್ಠಾನ ವತಿಯಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮನರಂಜನೆ ಪ್ರಧಾನ ಆಗ ಬಾರದು. ಓದಿನ ಜತೆಗೆ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಫೌಂಡೇಷನ್‍ನ ಗುರುನಾಥ ರಾಜಗೀರಾ ಮಾತನಾಡಿ, ಜಿಲ್ಲೆಯ ಆರು ಕಡೆ ಬೇಸಿಗೆ ಉಚಿತ ಶಿಬಿರ ನಡೆಯುತ್ತಿವೆ. ಮಕ್ಕಳಿಗೆ ಹಾಡು, ನೃತ್ಯ, ಕಥೆ, ಚಿತ್ರಕಲೆ, ಯೋಗಾಸನ, ಶಿಸ್ತು ಕಲಿಸಿಕೊಡಲಾಗುತ್ತಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಗ್ರಾಮ ವಿಕಾಸ, ಶಿಕ್ಷಣ ಮತ್ತು ದತ್ತಿ ಪ್ರತಿಷ್ಠಾನದ ಬಸವರಾಜ ಬಶೆಟ್ಟಿ ಮಾತನಾಡಿದರು. ಪ್ರಮುಖರಾದ ಧೋಂಡಿರಾಮ ಚಾಂದಿವಾಲೆ, ಶ್ರೀಕಾಂತ ಮೋದಿ, ಯೋಗೇಂದ್ರ ಯದಲಾಪೂರೆ, ಭದ್ರಪ್ಪ ಬಶೆಟ್ಟಿ, ಮಾಣಿಕಪ್ಪ ತಳಘಾಟ, ಶಾಂತಕುಮಾರ ಬಶೆಟ್ಟಿ, ರಾಜಕುಮಾರ ಪೋಳ, ಬಸವರಾಜ, ಮುಕೇಶ, ದೀಪಿಕಾ ಪಿಂಜ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT