ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಗ್ರಂಥಾಲಯ ಪ್ರಯೋಜನ ಪಡೆಯಿರಿ

ಮುಖ್ಯ ಗ್ರಂಥಾಲಯಾಧಿಕಾರಿ ಸಿದ್ಧಾರ್ಥ ಭಾವಿಕಟ್ಟೆ ಮನವಿ
Last Updated 10 ಆಗಸ್ಟ್ 2022, 10:42 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಜನ ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯದ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಸಿದ್ಧಾರ್ಥ ಎ. ಭಾವಿಕಟ್ಟೆ ಮನವಿ ಮಾಡಿದ್ದಾರೆ.
ಆನ್‍ಲೈನ್‍ನಲ್ಲಿ ಒಮ್ಮೆ ಉಚಿತ ನೋಂದಣಿ ಮಾಡಿದರೆ ಸಾಕು. ನಿರಂತರ ಡಿಜಿಟಲ್ ಗ್ರಂಥಾಲಯದ ಉಚಿತ ಸೇವೆ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಡಿಜಿಟಲ್ ಗ್ರಂಥಾಲಯದಲ್ಲಿ ಪಠ್ಯ, ಸ್ಪರ್ಧಾತ್ಮಕ ಪರೀಕ್ಷೆ, ಕತೆ, ಕಾದಂಬರಿ, ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಎಲ್ಲ ಬಗೆಯ ಪುಸ್ತಕಗಳು ಲಭ್ಯ ಇವೆ. ಜ್ಞಾನ ವೃದ್ಧಿಸಿಕೊಳ್ಳ ಬಯಸುವವರಿಗೆ ಬಹು ಉಪಯುಕ್ತವಾಗಿದೆ ಎಂದು ತಿಳಿಸಿದ್ದಾರೆ.
ಹೆಸರು ನೋಂದಣಿಗೆ ಮೊದಲು ಗೂಗಲ್‍ನಲ್ಲಿ ಕ್ರೋಮ್‍ನಲ್ಲಿwww.karnatakadigitalpubliclibrary.orgಎಂದು ಟೈಪ್ ಮಾಡಬೇಕು. ರಿಜಿಸ್ಟರ್ ಬಟನ್ ಆಯ್ಕೆ ಮಾಡಿಕೊಂಡು ಕೆಂಪು ಬಣ್ಣದಲ್ಲಿ ತೋರಿಸುವ ‘ಸಿ' ಕ್ಲಿಕ್ ಮಾಡಬೇಕು. ಹೆಸರು, ಮೊಬೈಲ್ ಸಂಖ್ಯೆ, ಇ ಮೇಲ್ ಐಡಿ ನೀಡಿ (ಐಚ್ಛಿಕ), ಡ್ರಾಪ್‍ಡೌನ್ ಪರಿವಿಡಿಯಿಂದ ಗ್ರಂಥಾಲಯವನ್ನು ಆಯ್ಕೆ ಮಾಡಿ (ನೋಂದಣಿ ಪ್ರಕ್ರಿಯೆಗೆ ಗ್ರಂಥಾಲಯ ಆಯ್ಕೆ ಕಡ್ಡಾಯ) ಸೈನ್‍ಅಪ್ ಕ್ಲಿಕ್ಕಿಸಬೇಕು. ನಂತರ ಮೊಬೈಲ್‍ನಲ್ಲಿ ಸ್ವೀಕರಿಸಿದ ಒಟಿಪಿ ನಮೂದಿಸಿ, ಕೇವಲ ನಾಲ್ಕು ಅಕ್ಷರಗಳ ಪಾಸ್‍ವರ್ಡ್ ನಮೂದಿಸಿ, ಸೈನ್‍ಅಪ್ ಬಟನ್ ಕ್ಲಿಕ್ ಮಾಡಿದರೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ಹೇಳಿದ್ದಾರೆ.
ನೋಂದಣಿ ಪೂರ್ಣಗೊಂಡ ಬಳಿಕ ಮೊಬೈಲ್ ಸಂಖ್ಯೆ ಹಾಗೂ ಪಾಸ್‍ವರ್ಡ್ ಬಳಸಿ ಡಿಜಿಟಲ್ ಗ್ರಂಥಾಲಯದಲ್ಲಿ ಲಾಗಿನ್ ಆಗಬಹುದು. ಮೊಬೈಲ್ ಆ್ಯಪ್ e-Sarvajanika Granthalaya ನಿಂದಲೂ ಇದೇ ಲಾಗಿನ್ ಹಾಗೂ ಪಾಸ್‍ವರ್ಡ್ ಬಳಸಿ ಡಿಜಿಟಲ್ ಗ್ರಂಥಾಲಯ ಬಳಸಬಹುದು ಎಂದು ತಿಳಿಸಿದ್ದಾರೆ.
https://play.google.com/store/apps/details?id=com.staging.mintbookಲಿಂಕ್ ಬಳಸಿ ಆ್ಯಪ್‍ನಲ್ಲಿ ಪ್ರವೇಶಿಸಬಹುದು ಎಂದು ತಿಳಿಸಿದ್ದಾರೆ.
ನೆರವಿನ ಅವಶ್ಯಕತೆ ಅಥವಾ ಹೆಚ್ಚಿನ ಮಾಹಿತಿಗೆ 08482-226401 ಗೆ ಕರೆ ಮಾಡಬಹುದು ಇಲ್ಲವೇdclbdr@yahoo.comಗೆ ಇ ಮೇಲ್ ಮಾಡಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT