ಬಸವಕಲ್ಯಾಣ: ‘ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ಜನವರಿ 25ರಂದು ನಗರದಲ್ಲಿ ತಾಲ್ಲೂಕು ಮಟ್ಟದ ಭೀಮಾ ಕೋರೆಗಾಂವ ವಿಜಯ ಉತ್ಸವ ಆಯೋಜಿಸಲಾಗಿದೆ’ ಎಂದು ಪ್ಯಾಂಥರ್ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ರವಿ ಗಾಯಕವಾಡ ತಿಳಿಸಿದರು.

ನಗರದಲ್ಲಿ ಸೋಮವಾರ ಕಾರ್ಯಕ್ರಮದ ಪ್ರಚಾರ ರಥಕ್ಕೆ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅಂದು ಸಂಜೆ 5ಕ್ಕೆ ಸಮಾರಂಭ ನಡೆಯಲಿದೆ. ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಭಂತೆ ಸಂಘಾನಂದ, ರಾಜಾ ಬಾಗಸವಾರ ದರ್ಗಾದ ಜಿಯಾಪಾಷಾ ಜಾಗೀರದಾರ್ ಸಾನ್ನಿಧ್ಯ ವಹಿಸುವರು. ಹಿರಿಯ ಮುಖಂಡ ತಾತೇರಾವ್ ಕಾಂಬಳೆ ವಿಶೇಷ ಉಪನ್ಯಾಸ ನೀಡುವರು. ಪ್ರಸಿದ್ಧ ಸಂಗೀತಗಾರ ಸಾಹೇಬರಾವ್ ಏರೇಕರ್ ಅವರಿಂದ ಭೀಮಗೀತೆಗಳ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಪೌರಾಡಳಿತ ಸಚಿವ ರಹೀಂ ಖಾನ್, ಸಂಸದ ಸಾಗರ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಮುಖಂಡ ಧನರಾಜ ತಾಳಂಪಳ್ಳಿ, ನಗರಸಭೆ ಅಧ್ಯಕ್ಷ ಮಹಮ್ಮದ್ ಸಗೀರುದ್ದೀನ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಆದ್ದರಿಂದ ಹೆಚ್ಚಿನ ಜನರು ಪಾಲ್ಗೊಳ್ಳಬೇಕು. ಪ್ರಚಾರ ರಥ ತಾಲ್ಲೂಕಿನಾದ್ಯದಂತ ಸಂಚರಿಸಲಿದೆ’ ಎಂದು ಹೇಳಿದರು.

ಪ್ರಮುಖರಾದ ನರಸಿಂಗರಾವ್ ಕಾಂಬಳೆ, ವಿನೋದ ಜಾಧವ, ಮಹೇಂದ್ರ ಬಗದೂರಿ, ವಿನೋದ ಶಿಂಧೆ, ಮುರಲಿ, ಮಾರುತಿ ಗುತ್ತಿ, ರಾಹುಲ್, ರವಿ ಶರಣನಗರ, ಶೇಖರ್, ಅಂಕುಶ ಕಾಂಬಳೆ, ಶ್ರೀಕಾಂತ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.