ಭಾಲ್ಕಿ: ‘ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡುವ ಸೈನಿಕರ ಕಾರ್ಯ, ಬದುಕು ನಮ್ಮೆಲ್ಲರಿಗೂ ಮಾದರಿ, ಸ್ಫೂರ್ತಿ’ ಎಂದು ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತ ಯಶಸ್ಸು ಗಳಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಾಗರಿಕ ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ದೇಶದ ರಕ್ಷಣೆ, ಸುರಕ್ಷತೆ ನಮ್ಮೆಲ್ಲರ ಪ್ರಥಮ ಆದ್ಯತೆ ಆಗಬೇಕು. ಸಮಯ ಬಂದರೆ ದೇಶಕ್ಕಾಗಿ ಪ್ರಾಣವನ್ನೂ ಅರ್ಪಿಸುವ ದೇಶಭಕ್ತಿಯ ಭಾವ ಎಲ್ಲರಲ್ಲಿ ಬೆಳೆಯಬೇಕು. ದೇಶ ಉಳಿದಾಗ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ . ಆಪರೇಷನ್ ಸಿಂಧೂರ್ ಮೂಲಕ ಆತಂಕವಾದಿಗಳನ್ನು ಮಟ್ಟ ಹಾಕಿದ ನಮ್ಮ ಸೈನಿಕರ ಶೌರ್ಯ ಜಗತ್ತು ಮೆಚ್ಚುವಂತದ್ದು’ ಎಂದು ಶ್ಲಾಘಿಸಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ‘ವಿದ್ಯಾರ್ಥಿಗಳು ಬಾಲ್ಯದಿಂದಲೇ ದೇಶಪ್ರೇಮದ ಕಿಚ್ಚು ಬೆಳೆಸಿಕೊಂಡು ರಾಷ್ಟ್ರದ ಸೇವೆಗೆ ಸಿದ್ಧರಾಗಬೇಕು. ಅಮಾಯಕ ಜೀವಗಳ ಬಲಿ ತೆಗೆದುಕೊಂಡ ಆತಂಕವಾದಿಗಳಿಗೆ ನಮ್ಮ ದೇಶದ ಹೆಮ್ಮೆ ಸೈನಿಕರು ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿರೋದು ಸಂತಸದ ಸಂಗತಿ’ ಎಂದು ತಿಳಿಸಿದರು.

ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ‘ದೇಶದ ರಕ್ಷಣೆಗಾಗಿ ನಾವೆಲ್ಲರೂ ಯಾವುದೇ ರೀತಿಯ ತ್ಯಾಗ ಮತ್ತು ಹೋರಾಟಕ್ಕೂ ಸಿದ್ಧರಾಗುವ ಮನಸ್ಥಿತಿ ಬೆಳೆಸಿಕೊಂಡು ದೇಶಪ್ರೇಮ ಮೆರೆಯಬೇಕು’ ಎಂದು ಹೇಳಿದರು.

ಮಾಜಿ ಸೈನಿಕ ಶಿವಲಿಂಗಯ್ಯ ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಮಾತನಾಡಿದರು.

ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಭಾಲ್ಕೇಶ್ವರ ಮಂದಿರದಿಂದ ಆರಂಭವಾದ ತಿರಂಗಾ ಯಾತ್ರೆ, ಬೊಮ್ಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಮಹಾತ್ಮ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡಿತು. ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ವೀರಣ್ಣ ಕಾರಬಾರಿ, ಶಿವರಾಜ ಗಂದಗೆ, ಗೋವಿಂದರಾವ್ ಬಿರಾದರ, ಚನ್ನಬಸವ ಬಳತೆ, ಕಿಶನರಾವ್ ಪಾಟೀಲ ಎನ್. ಡಿ. ಬಗದುರೆ, ತಾನಾಜಿ ರಾಠೋಡ್, ಸೋಮನಾಥಪ್ಪ ಅಷ್ಟುರೆ, ವೆಂಕಟ ಬಿರಾದಾರ, ಬಾಬುರಾವ್ ಧೂಪೆ, ಸುಭಾಷ ಬಿರಾದರ, ಸೂರಜ್ ಸಿಂಗ್ ರಜಪೂತ, ಕೆ. ಡಿ. ಗಣೇಶ, ಕಿರಣ್ ಖಂಡ್ರೆ, ಶಿವಲಿಂಗ ಕುಂಬಾರ, ಶಿವಾನಂದ ದಾಡಗೆ, ದಯಾನಂದ ಪವಾರ್, ಸತೀಶ ಮುದಾಳೆ, ಜಗನ್ನಾಥ ಬಿರಾದರ, ಸಂಜೀವ ಶಿಂಧೆ, ವೈದ್ಯರಾದ ಅಮಿತ್ ಅಷ್ಟೂರೆ, ವಸಂತ ಪವಾರ್, ಜಗದೀಶ ಭೂರೆ, ನಾಗೇಶ ಟೋಪಾರೆ, ಮಂಜುನಾಥ ಹಿರೇಮಠ, ಸಂಜೀವಕುಮಾರ ಪಂಡರಗಿರೆ, ರಾಜಗೋಪಾಲ ಬಿಯಾನಿ, ಬಿಜಿ ಸಂತೋಷ ಪಾಟೀಲ ಸೇರಿದಂತೆ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ನಿವೃತ್ತ ಸೈನಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.