ಔರಾದ್: ಮಂಗಳವಾರ ಸಾವನ್ನಪ್ಪಿದ ಬಿಎಸ್‍ಎಫ್ ಯೋಧ ಬಸವರಾಜ ಗಣಪತಿ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ತಾಲ್ಲೂಕಿನ ಆಲೂರ್ (ಬಿ) ಗ್ರಾಮದಲ್ಲಿ ನೆರವೇರಿತು.
ಮೃತದೇಹವನ್ನು ಪಂಜಾಬ್‍ನಿಂದ ವಿಮಾನದ ಮೂಲಕ ಹೈದರಾಬಾದ್‍ಗೆ ತಂದು ಅಲ್ಲಿಂದ ಸೇನಾ ವಾಹನದಲ್ಲಿ ರಸ್ತೆ ಮೂಲಕ ಆಲೂರ್(ಬಿ) ಗ್ರಾಮಕ್ಕೆ ತರಲಾಯಿತು. ಸಂಜೆ 5.30ರ ಹೊತ್ತಿಗೆ ಯೋಧನ ಮೃತದೇಹ ಗ್ರಾಮಕ್ಕೆ ಬರುತ್ತಿ ದ್ದಂತೆ ಯುವಕರು ಭಾರತ ಮಾತಾಕೀ ಜೈ ಎಂದು ಘೋಷಣೆ ಕೂಗಿದರು.
ಕೌಠಾ, ಕೌಡಗಾಂವ್, ವಡಗಾಂವ್ ಸೇರಿದಂತೆ ಸುತ್ತಲಿನ ಗ್ರಾಮಗಳ ಯುವಕರು, ಶವ ಹೊತ್ತು ತಂದ ಸೇನಾ ವಾಹನದ ಸುತ್ತುವರಿದು ಯೋಧನ ಸಾವಿಗೆ ಶೋಕ ವ್ಯಕ್ತಪಡಿಸಿದರು. ಅಂತ್ಯಕ್ರಿಯೆ ವೇಳೆ ಯೋಧನ ಸಂಬಂಧಿ ಕರ ಆಕ್ರಂದನ ಮುಗಿಲು ಮುಟ್ಟಿತು.
ಸೇನಾ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.
‘ಭಾರತ- ಪಾಕಿಸ್ತಾನ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಬಸವರಾಜ ಅವರು ಮಂಗಳವಾರ ಸಂಜೆ ತಮ್ಮ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ’ ಎಂದು ಅಲ್ಲಿಯ ಸೇನಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.