ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಗಳಿಂದ ಬದುಕು ಇನ್ನಷ್ಟು ಗಟ್ಟಿ: ಗೀತಾ ಎಸ್. ಗಡ್ಡಿ

ಸಹಾಯಕ ನಿರ್ದೇಶಕಿ ಗೀತಾ ಎಸ್. ಗಡ್ಡಿ ಹೇಳಿಕೆ
Last Updated 12 ಸೆಪ್ಟೆಂಬರ್ 2021, 15:16 IST
ಅಕ್ಷರ ಗಾತ್ರ

ಬೀದರ್‌: ‘ಜೀವನದಲ್ಲಿ ಎದುರಾಗುವ ಕಷ್ಟಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ಕಷ್ಟಗಳಿಗೆ ಹೆದರದೆ ಧೈರ್ಯ, ಸಾಹಸ, ಸತತ ಪ್ರಯತ್ನದಿಂದ ಮುನ್ನಡೆಯಬೇಕು’ ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಗೀತಾ ಎಸ್. ಗಡ್ಡಿ ತಿಳಿಸಿದರು.

ಸಮಾಜ ಸೇವಾ ಸಮಿತಿಯ ಶಾಖೆಯ ವತಿಯಿಂದ ಕುಂಬಾರವಾಡ ರಸ್ತೆಯಲ್ಲಿರುವ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತ ಆಯೋಜಿಸಿದ್ದ ’ಮಹಿಳಾ ಜಾಗೃತಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತಿ ರೇಣುಕಾ ಎನ್.ಬಿ. ಮಾತನಾಡಿ, ‘ಪುರುಷರ ಸಹಕಾರದಿಂದ ಮಹಿಳೆಯರ ಸಬಲೀಕರಣ ಸಾಧ್ಯ. ದುಡಿಯುವ ಸಾಮರ್ಥ್ಯ ಮಹಿಳೆಯರನ್ನು ಆತ್ಮವಿಶ್ವಾಸದೆಡೆಗೆ ಕರೆದುಕೊಂಡು ಹೋಗುತ್ತದೆ’ ಎಂದರು.

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಚಿಂತಕ ರಾಮಕೃಷ್ಣ ಸಾಳೆ ಹಾಗೂ ಹಿರಿಯ ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಮಾತನಾಡಿದರು. ವೈದ್ಯೆ ಡಾ.ಎ.ಸಿ.ಲಲಿತಮ್ಮ ಅಧ್ಯಕ್ಷತೆ ವಹಿಸಿದ್ದರು.

ನೀಲಮ್ಮ ಮಸೂದಿ-ಅರ್ಚನಾ ಮಸೂದಿ, ಶಶಿಕಲಾ ಕೊಡಿಮನಿ-ರತಿದೇವಿ ಕೊಡಿಮನಿ, ನರಸಮ್ಮ ಧರಮಗೊಂಡ-ಸವಿತಾ ಧರಮಗೊಂಡ, ಉತ್ತಮ ಶಿಕ್ಷಕ ದಂಪತಿ ಸರೂಬಾಯಿ-ಶಿವರಾಜ ಶ್ರೀಮಂಗಲೆ, ಅನ್ನಪೂರ್ಣ-ರಘನಾಥ ಮೇತ್ರೆ, ಸುಮಂಗಲಾ-ರಾಚಯ್ಯ ಸ್ವಾಮಿ, ಶ್ರೀದೇವಿ-ಧನರಾಜ್ ಕುಮಾರಚಿಂಚೊಳೆ, ಶ್ರೀಲತಾ- ಸಂಜೀವಕುಮಾರ ಅತಿವಾಳೆ, ಉತ್ತಮ ಶಿಕ್ಷಕ ಶಿವಶಂಕರಯ್ಯ ಸ್ವಾಮಿ, ದೇವಿಂದ್ರ ಡಿಗ್ಗಿ, ವೈಜಿನಾಥ ಬಾಬಶೆಟ್ಟೆ, ಶರಣಪ್ಪ ನಾಗೋರಾ, ಶಾರದಾ ಗಡಮೆ, ಇಂದುಮತಿ ಹತ್ತೆ, ವಿದ್ಯಾವತಿ ನೌಬಾದೆ, ಸರಿತಾ ಹುಡಗಿಕರ್, ಹರಿಯಾಲಾಬಾಯಿ ವಾಲೆ, ಭಾನುಪ್ರಿಯ ಅರಳಿ, ಶೋಭಾ ಜಕ್ಕಾ, ಅನುರಾಧಾ ಜಗದೀಶ ಅವರನ್ನು ಸನ್ಮಾನಿಸಲಾಯಿತು.

ಸೃಜನ್ಯ ಅತಿವಾಳೆ, ಯುಕ್ತಿ ಅರಳಿ, ದೀಪ್ತಿ ಸ್ವಾಮಿ ಪ್ರಾರ್ಥನೆ ಗೀತೆ ಹಾಡಿದರು. ಮಹಾದೇವಿ ಬಿರಾದಾರ ಸ್ವಾಗತಿಸಿದರು, ಶ್ರೀಲತಾ ಅತಿವಾಳೆ ನಿರೂಪಿಸಿದರು, ಶಾರದಾ ಗಡಮೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT