ಗುರುವಾರ , ಜುಲೈ 7, 2022
25 °C
ಶೀಘ್ರ ಐದು ಹೊಸ ಶಾಖೆ ಆರಂಭ

ಬೀದರ್‌: ಗಾಂಧಿ ಗಂಜ್ ಕೋ-ಆಪರೇಟಿವ್ ಬ್ಯಾಂಕ್‌ ನಿವ್ವಳ ಲಾಭ ₹ 95.50 ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮೂರು ತಾಲ್ಲೂಕು ಸೇರಿ ಒಟ್ಟು ಐದು ಹೊಸ ಶಾಖೆ ಹಾಗೂ ಸಹಕಾರ ತರಬೇತಿ ಕೇಂದ್ರ ಆರಂಭಿಸುವ ಉದ್ದೇಶವಿದೆ ಎಂದು ಎಂದು ದಿ ಗಾಂಧಿ ಗಂಜ ಕೋ-ಆಪರೆಟಿವ್ ಬ್ಯಾಂಕ್‌ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ ಹೇಳಿದರು.

ಇಲ್ಲಿಯ ದಿ ಗಾಂಧಿ ಗಂಜ್ ಕೋ-ಆಪರೆಟಿವ್ ಬ್ಯಾಂಕಿನ 47ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರದಿಂದ ನಿವೇಶನ ಪಡೆದು ಸಹಕಾರ ಶಿಕ್ಷಣ ತರಬೇತಿ ಕೇಂದ್ರ ಆರಂಭಿಸುವ ಉದ್ದೇಶವಿದೆ. ಹೂಲಸೂರು, ಕಮಲನಗರ, ಚಿಟಗುಪ್ಪ, ಮನ್ನಳ್ಳಿ ರಸ್ತಯಲ್ಲಿರುವ ಸಿದ್ದಾರೂಢ ಮಠ ಹಾಗೂ ಗುಂಪಾ ಪ್ರದೇಶದಲ್ಲಿ ಬ್ಯಾಂಕಿನ ಹೊಸ ಶಾಖೆಗಳನ್ನು ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಗಾಂಧಿ ಗಂಜ್ ಕೋ-ಆಪರೇಟಿವ್ ಬ್ಯಾಂಕ್‌ ಪ್ರಸಕ್ತ ವರ್ಷ ನಿವ್ವಳ ಲಾಭ ₹ 95.50 ಲಕ್ಷ ಲಾಭ ಗಳಿಸಿದೆ’ ಎಂದು ಹೇಳಿದರು.

ಹಿರಿಯ ಸದಸ್ಯೆ ಶಕುಂತಲಾ ವಾಲಿ, ಶಿವಶರಣಪ್ಪ ವಾಲಿ, ಚಂದ್ರಕಾಂತ ಶೆಟಕಾರ, ಎಸ್.ಆರ್. ಭಂಕಲಗಿ, ಕಲ್ಯಾಣಪ್ಪಾ ಐನಾಪೂರೆ ಮಾತನಾಡಿದರು.

ಸಿಇಒ ವಿಶ್ವನಾಥ ಕೊಡಗೆ ಸಾಮಾನ್ಯ ಸಭೆಯ 26 ವಿಷಯಗಳನ್ನು ಪ್ರಸ್ತಾಪಿಸಿದರು. ಸದಸ್ಯರಾದ ಶಾಂತಲಿಂಗ ಸವಳಗಿ, ಜೈರಾಜ ಖಂಡ್ರೆ, ವೀರಯ್ಯ ಸ್ವಾಮಿ, ಬಿ.ಎಸ್. ಪಾಟೀಲ ಹಾರೂರಗೇರಿ, ಬಸವಣಪ್ಪಾ ನೇಳಗಿ, ಶಿವರಾಜ ಹುಣಜೆ, ವಿಜಯಕುಮಾರ ಪಾಟೀಲ ಸುಲ್ತಾನಪೂರ, ಪಂಡುರಂಗರಾವ್ ಗಾದಗಿಕರ್, ಬಾಬುಮಿಯಾ ಚಂದಾ, ಕಾಶೀನಾಥ ಬಾಳೂರೆ, ಬಸವರಾಜ ರೊಟ್ಟಿ, ಶಂಕರೆಪ್ಪ ಮಲ್ಕಪೂರ, ಶಿವಲಿಂಗಪ್ಪಾ ಜಲಾದೆ, ಲಕ್ಷ್ಮಿಕಾಂತ ರಡ್ಡಿ, ಬಸವರಾಜ ಕೊಡಗೆ, ವೈಜಿನಾಥ ಕೊಡಗೆ, ರವೀಂದ್ರ ಜಾಂತಿಕರ್, ಸಂಗಶೆಟ್ಟಿ ಮೂಲಗೆ, ಶಂಕರ ದಾಡಗೆ, ಸೋಮನಾಥ ಅಷ್ಟೂರೆ, ಸುನೀಲಕುಮಾರ ಗಂಧೆ, ಶಿವರಾಜ ನೇಳಗೆ, ನಾಗಶೆಟ್ಟಿ ವಾಗದಾಳೆ, ಶಾಮಣ್ಣಾ ಐಸಪೂರ, ರಾಜಕುಮಾರ ಕಾಡವಾದ ಅನುಮೋದಿಸಿದರು.

ಉಪಾಧ್ಯಕ್ಷ ಕಮಲ ಕೀಶೋರ ಅಟ್ಟಲ್, ನಿರ್ದೇಶಕರಾದ ಅಶೋಕ ಕುಮಾರ ಲಾಚುರಿಯೆ, ದತ್ತಾತ್ರಿ ಸಿಂದೋಲ, ಕಾಶೀನಾಥ ಶೆಟಕಾರ, ಸೂರ್ಯಕಾಂತ ಶೆಟಕಾರ, ಅಂತೇಶ್ವರ ಶೆಟಕಾರ, ಸುನೀಲಕುಮಾರ ಬಿರಾದಾರ, ಜಯಕುಮಾರ ಕಾಂಗೆ, ಮಡಿವಾಳಪ್ಪ ಗಂಗಶೆಟ್ಟಿ, ಭರತ ಶೆಟಕಾರ, ಅಮರನಾಥ ಫೂಲೇಕರ್, ಶಿವನಾಥ ಪಾಟೀಲ, ಜ್ಯೋತಿ ಗೌರಶೆಟ್ಟಿ ಇದ್ದರು.

ಅಶ್ವಿನಿ ಲಕಶೆಟ್ಟಿ ನಿರೂಪಿಸಿದರು. ಕಮಲಕಿಶೋರ ಅಟ್ಟಲ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು