‘ಕೋಲಿ ಸಮಾಜ ಭವನಕ್ಕೆ ₹2 ಕೋಟಿ ಮಂಜೂರು ಮಾಡುತ್ತೇನೆ. ನಗರದ ರಸ್ತೆ ಸುಧಾರಣೆ ಶೀಘ್ರ ಆರಂಭಿಸಲಾಗುವುದು. ಮಹರ್ಷಿ ವಾಲ್ಮೀಕಿಯವರು ರಾಮಾಯಣ ಬರೆದು ನೈತಿಕ ಮೌಲ್ಯಗಳನ್ನು ಸಾರಿದ್ದಾರೆ. ಆದ್ದರಿಂದ ಎಲ್ಲರೂ ಶ್ರೀರಾಮನ ಆದರ್ಶ ಪಾಲಿಸಬೇಕು. ಶಿಕ್ಷಣ ಪಡೆದು ಅಭಿವೃದ್ಧಿ ಹೊಂದಬೇಕು’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.