ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಬೆಲೆ ಏರಿಕೆ

ಸ್ಥಳೀಯವಾಗಿ ಟೊಮೆಟೊ ಮಾರುತ್ತಿರುವ ರೈತರು: ಆವಕ ಕುಸಿತ
Last Updated 25 ಜುಲೈ 2020, 10:46 IST
ಅಕ್ಷರ ಗಾತ್ರ

ಚಿಟಗುಪ್ಪ: ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ಕೆಜಿಗೆ ₹50 ರ ಗಡಿ ತಲುಪಿದೆ.ಬೆಲೆ ಏರಿಕೆಯಿಂದಾಗಿ ಗ್ರಾಹಕರು ವರ್ತಕರ ಜತೆ ಚೌಕಾಸಿ ನಡೆಸುವಂತಾಗಿದೆ.

ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಆದ್ದರಿಂದ ರೈತರ ತೋಟಗಳಲ್ಲಿ ಟೊಮೆಟೊ ಬೆಳೆ ಹಾಳಾಗುತ್ತಿದೆ. ಮಾರುಕಟ್ಟೆಗೆ ಆವಕ ಕಡಿಮೆಯಾಗಿದೆ. ಪರಿಣಾಮ ಬೆಲೆ ಏರಿಕೆಯಾಗಿದೆ.

ಜೂನ್‌ ತಿಂಗಳ ಆರಂಭದಲ್ಲಿ ಪ್ರತಿ ಕೆಜಿ ಟೊಮೆಟೊ ₹15 ರಿಂದ 20ಕ್ಕೆ ಮಾರಾಟವಾಗುತ್ತಿತ್ತು. ಜೂನ್‌ ಅಂತ್ಯದ ವೇಳೆಗೆ ಮಳೆ ಆರಂಭವಾದ ಮೇಲೆ ಪ್ರತಿ ಕೆಜಿಗೆ ₹25 ರಿಂದ 30 ಆಗಿತ್ತು. ಆದರೀಗ ₹50ಕ್ಕೆ ಏರಿದೆ.

ತೆಲಂಗಾಣದ ಜಹಿರಾಬಾದ್‌, ಮಹಾರಾಷ್ಟ್ರದ ಸೊಲ್ಲಾಪುರದಿಂದ ಟೊಮೊಟೊ ಬರುತ್ತದೆ. ಅಲ್ಲದೆ, ತಾಲ್ಲೂಕಿನ ಬಹುತೇಕ ಗ್ರಾಮಗಳ ರೈತರ ಟೊಮೆಟೊ ತಾಲ್ಲೂಕಿನ ಮುಖ್ಯ ತರಕಾರಿ ಮಾರುಕಟ್ಟೆಗಳಾದ ಮನ್ನಾಎಖ್ಖೇಳಿ, ಚಿಟಗುಪ್ಪಗಳಿಗೆ ಬರುತ್ತದೆ.

ಕೊವೀಡ್ ಭೀತಿಯ ಕಾರಣ ಹೊರ ರಾಜ್ಯಗಳಿಂದ ಟೊಮೆಟೊ ಆವಕವಾಗುತ್ತಿಲ್ಲ. ಗ್ರಾಮಗಳಿಂದ ಬರುತ್ತಿದ್ದ ಟೊಮೆಟೊವನ್ನು ಸ್ಥಳೀಯವಾಗಿಯೇ ಮಾರಾಟ ಮಾಡಲಾಗುತ್ತಿದೆ.

ಸಹಜವಾಗಿ ಪಟ್ಟಣಗಳಲ್ಲಿ ಟೊಮೆಟೊ ಬೆಲೆ ಹೆಚ್ಚಾಗಿದೆ. ಇದರ ಪರಿಣಾಮ ಗ್ರಾಮೀಣ ವರ್ತಕರ ಮೇಲೆ ಆಗಿದ್ದರಿಂದ ಅಲ್ಲಿಯೂ ಬೆಲೆ ಹೆಚ್ಚಾಗಿದೆ.

ಬೆಲೆ ಹೆಚ್ಚಳದ ಲಾಭ ರೈತರಿಗಿಲ್ಲ: ‘ಟೊಮೆಟೊ ಬೆಲೆಯಲ್ಲಿ ಹೆಚ್ಚಳವಾಗಿದೆ. ವರ್ತಕರಿಗೆ ಲಾಭವಾಗುತ್ತಿದೆ. ತೋಟಗಳಲ್ಲಿ ಬೆಳೆದ ಟೊಮೆಟೊವನ್ನು ಬಹಳ ದಿನ ಇಡುವಂತಿಲ್ಲ. ಹಣ್ಣಾದ ತಕ್ಷಣ ಮಾರಾಟವಾಗಲೇಬೇಕು. ಹೀಗಾಗಿ ವರ್ತಕರು ಕೇಳಿದ ಬೆಲೆಗೆ ರೈತರು ಮಾರಬೇಕಾಗಿದೆ. ಹೀಗಾಗಿ ಬೆಲೆ ಹೆಚ್ಚಳದ ಲಾಭ ರೈತರಿಗೆ ಸಿಗುತ್ತಿಲ್ಲ’ ಎಂದು ರೈತ ಶಂಕರಪ್ಪ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT