ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಮನಾಬಾದ್ | ಹೊಲದಲ್ಲಿ ವಿಷಪೂರಿತ ತ್ಯಾಜ್ಯ: ತಪ್ಪಿತಸ್ಥರ ವಿರುದ್ಧ ಕ್ರಮ

Published 7 ಆಗಸ್ಟ್ 2024, 16:23 IST
Last Updated 7 ಆಗಸ್ಟ್ 2024, 16:23 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕಿನ ಮೋಳಕೇರಾ ಗ್ರಾಮದ ರೈತ ಇಸ್ಮಾಯಿಲ್ ಎಂಬುವವರ ಹೊಲದ ಪಕ್ಕದಲ್ಲಿ ಅಪರಿಚಿತರು ವಿಷಪೂರಿತ ತ್ಯಾಜ್ಯ  ಹಾಕಿದ್ದಾರೆ ಎಂಬ ದೂರಿನ ಮೇರೆಗೆ ಡಿವೈಎಸ್ಪಿ ಜೆ.ಎಸ್.ನ್ಯಾಮೇಗೌಡರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಡಿವೈಎಸ್ಪಿ ನ್ಯಾಮೇಗೌಡರ್ ಮಾತನಾಡಿ, ಇಸ್ಮಾಯಿಲ್ ಎಂಬ ರೈತನ ಹೊಲದ ಪಕ್ಕದ ಹಳ್ಳದಲ್ಲಿ ಯಾರೂ ಕೆಮಿಕಲ್ ಬಿಟ್ಟಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಕೆಲವು ಗಿಡ ಗಂಟಿಗಳು ಸುಟ್ಟು ಹೋಗಿವೆ. ಈ ಬಗ್ಗೆ ತನಿಖೆ ನಡಸಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT