ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಕೇರಾ ಕಾಳಿಕಾದೇವಿ ಉತ್ಸವ

ವಿವಿಧ ಧಾರ್ಮಿಕ ಕಾರ್ಯಕ್ರಮ: ಪಲ್ಲಕ್ಕಿ ಮೆರವಣಿಗೆ ಮೂಲಕ ಮಂಗಲ
Last Updated 8 ಏಪ್ರಿಲ್ 2022, 12:25 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಮಿನಕೇರಾ ಗ್ರಾಮದಲ್ಲಿ ಯುಗಾದಿ ನಿಮಿತ್ತ ನಡೆದ ಐದು ದಿನಗಳ ಕಾಳಿಕಾ ದೇವಿ ಉತ್ಸವ ಶುಕ್ರವಾರ ಪಲ್ಲಕ್ಕಿ ಮೆರವಣಿಗೆ ಮೂಲಕ ಮಂಗಲಗೊಂಡಿತು.

ದೇಗುಲದಲ್ಲಿ ನಡೆದ ಧರ್ಮ ಸಭೆಯಲ್ಲಿ,‘ಜಾತ್ರೆ, ಉತ್ಸವಗಳಿಂದ ಗ್ರಾಮ, ಪಟ್ಟಣ ಹಾಗೂ ನಗರಗಳಲ್ಲಿ ಅಧ್ಯಾತ್ಮಿಕತೆಯ ಶಕ್ತಿ ಹೆಚ್ಚಾಗುತ್ತದೆ. ನಾಗರಿಕರಿಗೆ ದೇವರ ಮೇಲೆ ಭಕ್ತಿ ಹುಟ್ಟುತ್ತದೆ’ ಎಂದು ಆನೆಗೊಂದಿ ಏಕದಂಡಗಿ ಮಠದ ಶ್ರೀನಿವಾಸ ಸ್ವಾಮೀಜಿ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರಶೇಖರ್‌ ಪಾಟೀಲ ಮಾತನಾಡಿ,‘ಕಾಳಿಕಾ ದೇವಿ ಆದಿಶಕ್ತಿಯ ರೂಪ. ದುಷ್ಟ ಶಕ್ತಿಯ ಸಂಹಾರ ಶಿಷ್ಟ ಶಕ್ತಿಯ ಉದ್ಧಾರ ದೇವಿಯಿಂದ ಸಕಲ ಜೀವಿಗಳಿಗೆ ವರ ಕರುಣೆ ಇದೆ’ ಎಂದರು.

ಮಾಜಿ ಶಾಸಕ ಅಶೋಕ ಖೇಣಿ, ಕಾಂಗ್ರೆಸ್‌ ಮುಖಂಡ ಚಂದ್ರಾಸಿಂಗ್‌, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಪತ್ರಕರ್ತರಾದ ಸಂಗಯ್ಯ ಹಿರೇಮಠ ಹಾಗೂ ಸಂಜೀವಕುಮಾರ ಜುನ್ನಾ ಮಾತನಾಡಿದರು.

ಕಲಾವಿದರಾದ ದಿಗಂಬರ ವಿಶ್ವಕರ್ಮ, ಮಚ್ಛೆಂದ್ರ ವಿಶ್ವಕರ್ಮ ನೇತೃತ್ವದಲ್ಲಿ ಬೆಂಗಳೂರಿನ ಸೃಷ್ಠಿ ಭರತ ನಾಟ್ಯ ಪ್ರದರ್ಶಿಸಿದರು.

ಮಹಾದೇವ ಆಚಾರ್ಯ ವೈದಿಕ ತಂಡದವರಿಂದ ಹೋಮ, ಹವನ ಪೂಜೆ ನಡೆದವು. ಜೆಡಿಎಸ್‌ ಮುಖಂಡ ಸಂತೋಷ ರಾಸೂರ್‌ ಅವರಿಂದ ಭಕ್ತರಿಗೆ ಅನ್ನ ದಾಸೋಹ ಸೇವೆ ನಡೆಯಿತು.

ಶೇಖರ್‌ ಪಂಚಾಳ, ಮಂಜುನಾಥ ಪಂಚಾಳ್‌, ಮನೋಹರ ವಿಶ್ವಕರ್ಮ, ನಂದಕುಮಾರ ಪಂಚಾಳ್‌, ಪ್ರಭಾಕರ್‌ ಶಾಸ್ತ್ರಿ ವಿಶ್ವಕರ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಪ್ಪ ಅರ್ಕಿ, ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ ತೊಂಟಿ, ಧನರಾಜ್‌ ಗಬಾಡಿ, ಗಣ್ಯರಾದ ಶಿವರಾಜ್‌ ನೀಲಾ, ಜಗದೀಶ ರೊಡ್ಡಾ, ಪರಮೇಶ್ವರ ಸೋಲಪುರ್‌, ಚಂದ್ರಶೇಖರ್‌ ಚನ್ನಶೆಟ್ಟಿ,ಶಿವಕುಮಾರ ಜುನ್ನಾ, ಮಹಾದೇವಯ್ಯ ಗವಿ, ವಿನೋದ ರೊಡ್ಡ, ರಾಜು ತರಿ, ರಾಜು ಪಂಚಾಳ್‌ ಇತರರು ಪಾಲ್ಗೊಂಡಿದ್ದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಳಿಕಾ ದೇವಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ಸಡಗರ, ಸಂಭ್ರಮದಿಂದ ನಡೆಯಿತು. ದಾರಿಯುದ್ದಕ್ಕೂ ಮಹಿಳೆಯರು ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ಕರ್ಫೂರದಾರತಿ ಬೆಳಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT