ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಳೆಗಾಂವದಲ್ಲಿ ಲಸಿಕಾಕರಣ, ಆರೋಗ್ಯ ತಪಾಸಣೆ ಇಂದು

Last Updated 11 ಸೆಪ್ಟೆಂಬರ್ 2021, 12:11 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಭಾಲ್ಕಿ ತಾಲ್ಲೂಕಿನ ಬೊಳೆಗಾಂವ ಗ್ರಾಮದಲ್ಲಿ ಸೆ. 12 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ಕೋವಿಡ್ ಲಸಿಕಾಕರಣ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಡಾ. ವಿವೇಕ ನಿಂಬೂರ, ಡಾ. ಶ್ರೀಕಾಂತ ರೆಡ್ಡಿ, ಡಾ. ಸಂಗಮೇಶ ಕೆ, ಡಾ. ನಾಗೇಶ ಪಾಟೀಲ, ಡಾ. ಕಪಿಲ್ ಪಾಟೀಲ, ಡಾ. ಮಲ್ಲಿಕಾರ್ಜುನ ಚಟ್ನಳ್ಳಿ, ಡಾ. ಪ್ರವೀಣ ದೇಶಪಾಂಡೆ, ಡಾ. ಎನ್. ಅರುಣಕುಮಾರ, ಡಾ. ಸಂದೀಪ್ ಪಾಟೀಲ ಹಾಗೂ ಡಾ. ಶಿಲ್ಪಾ ಬುಳ್ಳಾ ಅವರನ್ನು ಒಳಗೊಂಡ ತಂಡ ಆರೋಗ್ಯ ತಪಾಸಣೆ ನಡೆಸಲಿದೆ. ಡಾ. ಶರಣ ಬುಳ್ಳಾ ಶಿಬಿರದ ಸಂಯೋಜಕರಾಗಿದ್ದಾರೆ.

ಕೋವಿಡ್‍ನಿಂದ ಸುರಕ್ಷತೆ ಹಾಗೂ ಸೋಂಕು ತಡೆಗೆ ಲಸಿಕೆ ಅಗತ್ಯವಾಗಿದೆ. ಹೀಗಾಗಿ ಬೊಳೆಗಾಂವ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನ ಕೋವಿಡ್ ಲಸಿಕಾಕರಣ ಹಾಗೂ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆಯಬೇಕು ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಡಾ. ನಿತೇಶಕುಮಾರ ಬಿರಾದಾರ ಹಾಗೂ ಕಾರ್ಯದರ್ಶಿ ಸುಧೀಂದ್ರ ಸಿಂದೋಲ್ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT