ಸೋಮವಾರ, ಜನವರಿ 20, 2020
29 °C

ವಚನ ಸಾಹಿತ್ಯ ಜಗತ್ತಿನಲ್ಲಿಯೇ ಶ್ರೇಷ್ಠ: ಬಿ.ವೈ.ವಿಜಯೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ವಚನ ಸಾಹಿತ್ಯ ಜಗತ್ತಿನಲ್ಲಿಯೇ ಶ್ರೇಷ್ಠವಾದದ್ದು. 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯಿಂದ ಸಾಕಷ್ಟು ಬದಲಾವಣೆಗೆ ನಾಂದಿ ಹಾಡಿತು. ಇಂತಹ ಶರಣ ಸಾಹಿತ್ಯ ಪ್ರಪಂಚದ ಯಾವುದೇ ಮೂಲೆಯಲ್ಲಿ ದೊರೆಯದು’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿ.ವೈ.ವಿಜಯೇಂದ್ರ ಹೇಳಿದರು.

ನಗರದ ಬಿ.ವಿ.ಬಿ.ಕಾಲೇಜು ಆವರಣದಲ್ಲಿ ಬಸವ ಕೇಂದ್ರದ ವತಿಯಿಂದ ಆಯೋಜಿಸಿರುವ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮುರುಘಾ ಶರಣು ಬಸವ ತತ್ವಗಳನ್ನು ಬಿತ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶ್ವದ ಅನೇಕ ಭಾಷೆಗಳಿಗೆ ಅನುವಾದ ಭಾಷಾಂತರಗೊಳ್ಳಬೇಕಿದೆ. ಜಗತ್ತಿನ ಯಾವ ಸಾಹಿತ್ಯವೂ ಇಷ್ಟು ಸರಳವಾಗಿಲ್ಲ.ಬಸಣ್ಣನವರು ಮಾನವ ಧರ್ಮವನ್ನು ಪ್ರತಿಪಾದಿಸಿದ್ದಾರೆ. ಅವರೊಬ್ಬ ವಿಶ್ವದ ಶ್ರೇಷ್ಣ ಚಿಂತಕ’ ಎಂದು ಬಣ್ಣಿಸಿದರು.

‘ಪ್ರಧಾನತ್ರಿ ನರೇಂದ್ರ ಮೋದಿ ಅವರು ರೈತ ಸಮ್ಮಾನ ಯೋಜನೆ ಅಡಿ ರೈತರಿಗೆ ₹ 6 ಸಾವಿರ ಕೊಟ್ಟರೆ, ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ರೈತರಿಗೆ ₹ 4 ಸಾವಿರ ರೂಪಾಯಿ ಪ್ರಕಟಿಸಿ ರೈತಪರವಾದ ಸಂದೇಶ ನೀಡಿದರು’ ಎಂದು ತಿಳಿಸಿದರು.
‘ಸಮಾನತೆಯ ಸಮಾಜ ಕಟ್ಟಲು ಪ್ರತಿಯೊಬ್ಬರು ಸಹಕರಿಸಬೇಕಿದೆ. ಈ ದಿಸೆಯಲ್ಲಿ ಬಿ.ಎಎಸ್‌.ಯಡಿಯೂರಪ್ಪ ಪ್ರಯತ್ನ ನಡೆಸಿದ್ದಾರೆ’ ಎಂದು ಹೇಳಿದರು.

ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ಹಾಗೂ ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಶರಣ ಸಂಸ್ಕೃತಿ ಉತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಗುರುನಾಥ ಕೊಳ್ಳೂರ ಅಧ್ಯಕ್ಷತೆ ವಹಿಸಿದ್ದರು.  ಸಾಹಿತಿ ಮಹೇಶ ಚಟ್ನಳ್ಳಿ ಅನುಭಾವ ಮಂಡಿಸಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್.

ಬಿಜೆಪಿ ರಾಜ್ಯ ಯುವ ಮೊರ್ಚಾದ ಪ್ರಧಾನ ಕಾರ್ಯದರ್ಶಿ ತಮ್ಮೇಶಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಜಿ.ಎನ್.ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್, ಶರಣ ಸಂಸ್ಕೃತಿ ಉತ್ಸವ ಸಮಿತಿಯ ಉಪಾಧ್ಯಕ್ಷ ಬಾಬುವಾಲಿ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಧನರಾಜ ತಾಳಂಪಳ್ಳಿ, ಪ್ರಧಾನ ಕಾರ್ಯದರ್ಶಿ ಕುಶಾಲ ಪಾಟೀಲ ಗಾದಗಿ, ಬಿಜೆಪಿ ಮುಖಂಡರಾದ ಡಿ.ಕೆ. ಸಿದ್ರಾಮ, ಬಾಬುರಾವ್ ಕಾರಬಾರಿ, ಬಂಡೆಪ್ಪ ಕಂಟೆ, ಬೀದರ್ ಎಪಿಎಂಸಿ ಅಧ್ಯಕ್ಷ ಅನಿಲಕುಮಾರ ಪನ್ನಾಳೆ, ಬಾಬುರಾವ್ ಕಾರಬಾರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಧೀರ ಕಾಡಾದಿ ಹಾಗೂ ಶಕುಂತಲಾ ಬೆಲ್ದಾಳೆ ಇದ್ದರು.

ಶರಣಪ್ಪ ಮಿಠಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭುರಾವ್‌ ವಸ್ಮತೆ ಸ್ವಾಗತಿಸಿದರು. ಸುರೇಶ ಚನಶೆಟ್ಟಿ ನಿರೂಪಿಸಿದರು. ಶಿವಕುಮಾರ ಸಾಲಿ ವಂದಿಸಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು