ಹುಲಸೂರ: ‘ತನ್ನ ಅಂತರಂಗದ ಬೆಳಕಿನಿಂದ ತನ್ನ ತಾ ಕಾಣಬೇಕು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಹುಲಸೂರ ತಾಲ್ಲೂಕಿನ ಲಿಂಗಾಯತ ಮಹಾಮಠ ಗೋರ್ಟಾ (ಬಿ ) ಗ್ರಾಮದಲ್ಲಿ ಶ್ರಾವಣ ಮಾಸದ ಶರಣರ ಜೀವನ ದರ್ಶನ ಪ್ರವಚನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಅರಿವು ನಮಗಾಗಲೆಂದೇ ಶರಣರು ನಮಗೆ ವಚನಗಳು ಹಾಗೂ ಇಷ್ಟ ಲಿಂಗವನ್ನು ಕೊಟ್ಟಿದ್ದಾರೆ. ಇಷ್ಟಲಿಂಗ ಅರಿವಿನ ಕುರುಹು, ವಚನಗಳು ಬದುಕಿನ ದಾರಿದೀಪ’ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಚನ್ನಬಸಪ್ಪ ಪತಂಗೆ ಮಾತನಾಡಿ, ‘ನಮ್ಮ ಶ್ರೀಮಠವು ಕರ್ನಾಟಕಕ್ಕೆ ಮಾದರಿ. ಎಲ್ಲಾ ಕಡೆ ಶ್ರಾವಣ ಮಾಸದಲ್ಲಿ ಪ್ರವಚನಕಾರರನ್ನು ಕರೆಸಿ ಪ್ರವಚನಗಳನ್ನು ಮಾಡಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಗುರುಗಳು ನೀಲಮ್ಮನ ಬಳಗದ ತಾಯಂದಿರಿಂದ ಚಿಂತನೆ ಮಾಡುವುದನ್ನು ಹಾಕಿ ಕೊಟ್ಟು ಮಾದರಿಯ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ’ ಎಂದರು.

ಬಸವರಾಜ ಕಣಜೆಯವರು ಮಾತನಾಡಿದರು. ಕಾರ್ಯಕ್ರಮದ ಷಟಸ್ಥಲ ಧ್ವಜಾರೋಹಣವನ್ನು ಮಲ್ಲಮ್ಮ ಸುಭಾಷ ಪತಂಗೆ ನೆರವೇರಿಸಿದರು. ಉದ್ಘಾಟನೆಯನ್ನು ನಿವೃತ್ತ ಶಿಕ್ಷಕ ಬಸವರಾಜ ಮಾಶೆಟ್ಟಿ ನಡೆಸಿಕೊಟ್ಟರು.

ಲಿಂಗಾಯತ ಮಹಾಮಠದ ಗೋದಾವರಿ ತಾಯಿ, ವಿಮಲಾಬಾಯಿ ಪೊಲೀಸ್ ಪಾಟೀಲ, ಸುರೇಖಾ ವೀರಶೆಟ್ಟಿ ರಾಜೋಳೆ ಉಪಸ್ಥಿತರಿದ್ದರು. ಪ್ರಜ್ವಲ್ ರಾಜೋಳೆ ಸ್ವಾಗತಿಸಿದರು. ಪ್ರಜ್ವಲ್ ಪತಂಗೆ ನಿರೂಪಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.