ಶುಕ್ರವಾರ, ಜನವರಿ 24, 2020
21 °C

ಬೀದರ್: ಸಂಭ್ರಮದ ವೈಕುಂಠ ಏಕಾದಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿಯ ರಾಂಪುರೆ ಕಾಲೊನಿಯ ಲಕ್ಷ್ಮಿ ಸತ್ಯನಾರಾಯಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಹೋಮ–ಹವನ, ವಿಶೇಷ ಪೂಜೆ, ಅರ್ಚನೆ ಮತ್ತಿತರ ಕಾರ್ಯಕ್ರಮಗಳಲ್ಲಿ ವಿವಿಧೆಡೆಯ ಅಪಾರ ಭಕ್ತರು ಪಾಲ್ಗೊಂಡರು.

ದೇವಸ್ಥಾನದಲ್ಲಿ ಬೆಳಿಗ್ಗೆ ಸುಪ್ರಭಾತ, ವಿಶೇಷ ಅಭಿಷೇಕ, ಪುಷ್ಪಾಲಂಕಾರ, ಕಮಲ ಪುಷ್ಪ ಯಾಗದ ಸಂಕಲ್ಪ, ಸಾಮೂಹಿಕ ಸತ್ಯನಾರಾಯಣ ವೃತ, ಮಧ್ಯಾಹ್ನ ಪುಷ್ಪ ಯಾಗದ ಪೂರ್ಣಾಹುತಿ, ಮಹಾ ಮಂಗಳಾರತಿ, ಸಾಮೂಹಿಕ ಭಗವದ್ಗೀತೆ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ, ಸಂಜೆ ಪಾಂಡುರಂಗ ಮಹಾರಾಜರಿಂದ ಭಜನೆ, ಕೀರ್ತನೆ ಮತ್ತಿತರ ಕಾರ್ಯಕ್ರಮಗಳು ಜರುಗಿದವು. ಲಕ್ಷ್ಮಿ ಸತ್ಯನಾರಾಯಣ ಚಾರಿಟಬಲ್ ಟ್ರಸ್ಟ್ ಮತ್ತು ಲಕ್ಷ್ಮಿ ಸತ್ಯನಾರಾಯಣ ಗೋಶಾಲೆ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಮೈಲಾಪುರ, ನರಸಿಂಹ ವಾಸುದೇವ ದೀಕ್ಷಿತ ಭಾಗವಹಿಸಿದ್ದರು. ಅನಂತಶಯನ ಮಂದಿರದಲ್ಲಿಯೂ ಆಚರಿಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು