ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ವಮನ ಕರ್ಮ’ದಿಂದ ರೋಗ ನಿರೋಧಕ ಶಕ್ತಿ ವೃದ್ಧಿ

Published 1 ಮಾರ್ಚ್ 2024, 16:33 IST
Last Updated 1 ಮಾರ್ಚ್ 2024, 16:33 IST
ಅಕ್ಷರ ಗಾತ್ರ

ಬೀದರ್: ನಗರದ ಸಿದ್ಧಾರೂಢ ಆಸ್ಪತ್ರೆಯಲ್ಲಿ ಪಂಚ ಕರ್ಮ ವಿಭಾಗದಿಂದ ವಾಸಂತಿಕ ವಮನ ಕರ್ಮ ಉಚಿತ ತಪಾಸಣಾ ಶಿಬಿರ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆಯ ಡೀನ್ ಡಾ. ವಿಜಯಕುಮಾರ ಬಿರಾದಾರ ಉದ್ಘಾಟಿಸಿ, ’ವಮನ ಕರ್ಮ'ವು ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ವಮನ ಕರ್ಮ ಪಂಚಕರ್ಮ ಚಿಕಿತ್ಸೆಗಳಲ್ಲಿ ಒಂದು. ವಸಂತ ಋತುವಿನಲ್ಲಿ ಉಲ್ಬಣಿಸುವ ಕಫದ ರೋಗಗಳನ್ನು ನಿವಾರಿಸುತ್ತದೆ. ಆಸ್ತಮಾ, ಸೋರಿಯಾಸಿಸ್, ಎಸ್ಜಿಮಾ, ಬೊಜ್ಜು, ಆಮ್ಲೀಯತೆ, ಥೈರಾಯ್ಡ್ ಮೊದಲಾದವುಗಳಿಗೆ ಶ್ರೇಷ್ಠ ಚಿಕಿತ್ಸಾ ಪದ್ಧತಿಯಾಗಿದೆ ಎಂದು ಹೇಳಿದರು.

ಉಪ ಪ್ರಾಚಾರ್ಯೆ ಡಾ. ಶ್ರೀದೇವಿ ಸ್ವಾಮಿ, ಡಾ. ಅಶ್ವಿನಿಕುಮಾರ, ಡಾ. ಅನಿಲಕುಮಾರ ಬಚ್ಚಾ, ಡಾ. ಬಂಡೆಪ್ಪ, ಡಾ. ಸಂಜೀವಕುಮಾರ, ಡಾ. ರವಿಚಂದ್ರ, ಡಾ. ಅನೂಪ್, ಡಾ. ಪ್ರೀತಿ, ಡಾ. ಮಹಾದೇವ, ಡಾ. ಶುಬಧಾ, ಡಾ. ಮಲ್ಲಿಕಾರ್ಜುನ. ಡಾ. ಯೋಗೇಶ್ವರಿ ಬಿರಾದಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT