ಬೀದರ್: ಎರಡು ವಾರಗಳ ಹಿಂದೆ ಒಮ್ಮೆಲೆ ಕುಸಿದಿದ್ದ ಈರುಳ್ಳಿ ಬೆಲೆ ಇದೀಗ ನಿಧಾನವಾಗಿ ಏರತೊಡಗಿದೆ. ಈರುಳ್ಳಿ ಮಹಿಮೆಯನ್ನು ಅರಿತುಕೊಂಡು ಮುಂದೊಂದು ದಿನ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಮಾಡಲಿದೆ ಎನ್ನುವ ಆತಂಕದಿಂದ ಕೇಂದ್ರ ಸರ್ಕಾರ ಹಿಂಗಾರು ಹಿಂಗಾಮಿನಲ್ಲಿ 3 ಲಕ್ಷ ಟನ್ ಈರುಳ್ಳಿ ಖರೀದಿಸಲು ಮುಂದಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಸ್ಥಿರತೆ ಸಾಧ್ಯವಾಗಲಿದೆ.

ಬೀನ್ಸ್ ಇಲ್ಲದೇ ಫಲಾವ್ ಮಾಡಲಾಗದು. ಮದುವೆ ಸಮಾರಂಭಗಳು ಶುರುವಾಗಿರುವ ಕಾರಣ ಬೀನ್ಸ್ ಬೆಲೆ ಮಾರುಕಟ್ಟೆಯಲ್ಲಿ ಶತಕ ಬಾರಿಸಿದೆ. ತೆಲಂಗಾಣದ ರೈತರು ಹಾಗೂ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ.

ಪ್ರತಿ ಕ್ವಿಂಟಲ್‌ಗೆ ಈರುಳ್ಳಿ ಬೆಲೆ ₹ 500 ಏರಿದೆ. ಆಲೂಗಡ್ಡೆ, ಎಲೆಕೋಸು, ಹೂಕೋಸು, ಕೊತಂಬರಿ ₹ 1 ಸಾವಿರ, ಬೀನ್ಸ್, ಹಿರೇಕಾಯಿ, ನುಗ್ಗೆಕಾಯಿ, ಡೊಣಮೆಣಸಿನ ಕಾಯಿ, ಚವಳೆಕಾಯಿ, ಮೆಂತೆ ಬೆಲೆ ₹ 2 ಸಾವಿರ ಹೆಚ್ಚಾಗಿದೆ.

ಏರಿದ್ದು ಇಳಿಯಲೇ ಬೇಕು ಎನ್ನುವಂತೆ ಬೆಳ್ಳುಳ್ಳಿ, ಕರಿಬೇವು ₹ 4 ಸಾವಿರ ಹಾಗೂ ಟೊಮೆಟೊ ಬೆಲೆ ₹ 1 ಸಾವಿರ ಇಳಿದಿದೆ. ಮೆಣಸಿನಕಾಯಿ, ಗಜ್ಜರಿ, ಬದನೆಕಾಯಿ, ಬೆಂಡೆಕಾಯಿ, ಸೌತೆಕಾಯಿ, ತುಪ್ಪದ ಹಿರೇಕಾಯಿ, ಸಬ್ಬಸಗಿ ಹಾಗೂ ಪಾಲಕ್ ಬೆಲೆ ಸ್ಥಿರವಾಗಿದೆ.

ಹುಮನಾಬಾದ್‌ನಲ್ಲಿ ಈರುಳ್ಳಿ ಬೀಜ ಮಾತ್ರ ಬೆಳೆಸಲಾಗುತ್ತದೆ. ಬೆಳೆಯುವುದು ಮಹಾರಾಷ್ಟ್ರದ ಜಿಲ್ಲೆಗಳಲ್ಲೇ. ಹೀಗಾಗಿ ಮಹಾರಾಷ್ಟ್ರದ ನಾಸಿಕ್, ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ. ಹೈದರಾಬಾದ್‌ನಿಂದ ಬೀನ್ಸ್, ಗಜ್ಜರಿ, ನುಗ್ಗೆಕಾಯಿ, ಬೀಟ್‌ರೂಟ್, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ, ಎಂದಿನಂತೆ ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಹಾಗೂ ಕೊತಂಬರಿ ನಗರದ ಮಾರುಕಟ್ಟೆಗೆ ಬಂದಿದೆ.

‘ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಹೋಬಳಿ ಪ್ರದೇಶ, ಚಿಟಗುಪ್ಪ ಹಾಗೂ ಬೀದರ್ ತಾಲ್ಲೂಕಿನಿಂದ ಬದನೆಕಾಯಿ, ಹೂಕೋಸು, ಎಲೆಕೋಸು, ಮೆಂತೆ ಹಾಗೂ ಸಬ್ಬಸಗಿ ಸೊಪ್ಪು ಮಾರುಕಟ್ಟೆಗೆ ಬಂದಿದೆ. ಬಿಸಿಲು ಹೆಚ್ಚುತ್ತಿರುವ ಕಾರಣ ತರಕಾರಿ ಬೆಲೆ ಹೆಚ್ಚಾಗುತ್ತಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಬೀದರ್ ತರಕಾರಿ ಚಿಲ್ಲರೆ ಮಾರುಕಟ್ಟೆ

ತರಕಾರಿ;ಕಳೆದ ವಾರ; ಈ ವಾರ (ಪ್ರತಿ ಕೆ.ಜಿಗೆ ₹ಗಳಲ್ಲಿ)

ಈರುಳ್ಳಿ 10-15, 10-20
ಬೆಳ್ಳುಳ್ಳಿ 80-100,50-60
ಆಲೂಗಡ್ಡೆ 10-20,20-30
ಮೆಣಸಿನಕಾಯಿ 60-80,60-80
ಎಲೆಕೋಸು 15-20,20-30
ಹೂಕೋಸು 20-30,30-40
ಗಜ್ಜರಿ 30-40,30-40
ಬೀನ್ಸ್ 70-80,80-100
ಟೊಮೆಟೊ 10-20, 05-10

ಬದನೆಕಾಯಿ 20-30,20-30
ಬೆಂಡೆಕಾಯಿ 70-80,60-80
ಹಿರೇಕಾಯಿ 50-60,60-80
ನುಗ್ಗೆಕಾಯಿ 60-70,60-80

ಡೊಣಮೆಣಸಿನ ಕಾಯಿ 50-60,60-80
ಚವಳೆಕಾಯಿ 60-70,60-80
ಸೌತೆಕಾಯಿ 20-30,20-30
ತುಪ್ಪದ ಹಿರೇಕಾಯಿ 60-80,60-80

ಮೆಂತೆ 30-40,50-60
ಸಬ್ಬಸಗಿ 60-80,60-80
ಕರಿಬೇವು 80-90,40-50
ಕೊತಂಬರಿ 20-30,30-40
ಪಾಲಕ್ 30-40, 30-40

ಪೇಟೆ ಧಾರಣಿ
(ಪ್ರತಿ ಕ್ವಿಂಟಲ್– ಕನಿಷ್ಠ– ಗರಿಷ್ಠ ರೂಪಾಯಿಗಳಲ್ಲಿ)

ಕಡಲೆ ಕಾಳು – 4,510; 5,100
ಅವರೆಕಾಯಿ - 4,400; 6,000
ಜೋಳ 3,000; 4,500
ನುಚ್ಚು ಅಕ್ಕಿ 2,300; 2,500

ಅಕ್ಕಿ 4,400; 6,000
ಸೋಯಾಬಿನ್ 4,850; 5,190
ಗೋಧಿ 2,300; 3,000
ಕುಸುಬೆ 4,100; 4,500

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.