ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರಿಯ ನಾಗರಿಕರಿಂದ ಮತದಾನ ಜಾಗೃತಿ ಅಭಿಯಾನ

Published 19 ಮಾರ್ಚ್ 2024, 16:10 IST
Last Updated 19 ಮಾರ್ಚ್ 2024, 16:10 IST
ಅಕ್ಷರ ಗಾತ್ರ

ಬೀದರ್‌: ಹಿರಿಯ ನಾಗರಿಕರ ಯೋಗ ತಂಡದಿಂದ ನಗರದ ಗುರುನಾನಕ ಕಾಲೊನಿಯಲ್ಲಿ ಮಂಗಳವಾರ ಮತದಾನ ಜಾಗೃತಿ ಅಭಿಯಾನ ಹಾಗೂ ಜಾಥಾ ನಡೆಯಿತು.

ರಾಮಕೃಷ್ಣ ಮುನಿಗ್ಯಾಲ್ ಮಾತನಾಡಿ, ‘ವಿವಿಧ ಸ್ಥಳಗಳಲ್ಲಿ ಮತದಾನ ಜಾಗೃತಿ, ಪರಿಸರ ಜಾಗೃತಿ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನೋತ್ಸವದ ಮಹತ್ವ ಸಾರಲಾಗುತ್ತಿದೆ. ಈ ರೀತಿಯ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಹಮ್ಮಿಕೊಳ್ಳುವುದರಿಂದ ಮನುಷ್ಯನ ಜ್ಞಾನ ವೃದ್ಧಿಯಾಗುತ್ತದೆ’ ಎಂದು ತಿಳಿಸಿದರು.

ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ ಮಾತನಾಡಿ, ವಿವಿಧ ಉದ್ದೇಶಗಳನ್ನು ಇಟ್ಟುಕೊಂಡು ತೆಲಂಗಾಣ ರಾಜ್ಯದ ಅನೇಕ ಭಾಗಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವಿಜಯಲಕ್ಷ್ಮಿ ಗoಗಪ್ಪ ಸಾವಲೆ ಜಾಥಾಕ್ಕೆ ಹಸಿರು ನಿಶಾನೆ ತೋರಿದರು. 

ಹಿರಿಯ ಯೋಗ ಮೇಲ್ವಿಚಾರಕ ಗಂಗಪ್ಪ ಸಾವಲೆ, ಮಲ್ಲಿಕಾರ್ಜುನ ಪಾಟೀಲ, ಅಶೋಕ ಶೀಲವಂತ, ವೀರಶೆಟ್ಟಿ, ಸಂಜು ಪಾಟೀಲ, ಸಂಜುಕುಮಾರ ಶೀಲವಂತ, ಬಸವರಾಜ ತೋರಣ, ರಮೇಶ ಕಪಲಾಪೂರ, ಪೂಜಾ ಶೀಲವಂತ, ಚಂದ್ರಶೇಖರ ದೇವಣಿ, ಗಂಗಾಧರ ಪಾಟೀಲ, ರಾಮಚಂದ್ರ ಗಜರೆ, ಅರುಣಾ, ಪುಷ್ಪಾ, ವೀಣಾ, ವಿಜಯಲಕ್ಷ್ಮಿ, ಸುಲೋಚನಾ, ಸರೋಜಿನಿ ಪಾಟೀಲ, ಭುವನೇಶ್ವರಿ, ಸಾಕ್ಷಿ, ಸುಲೋಚನಾ ಪಾಟೀಲ, ಸುನೀತಾ, ಜ್ಯೋತಿ, ಸುನೀತಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT