ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಯುವ ಸ್ಪಂದನ ಕಾರ್ಯಕ್ರಮ

Last Updated 21 ಜನವರಿ 2022, 14:53 IST
ಅಕ್ಷರ ಗಾತ್ರ

ಬೀದರ್‌: ‘ಯುವಕರು ತ್ವರಿತ ಪ್ರತಿಫಲ ಅಪೇಕ್ಷಿಸದೆ ಕೆಲಸ ಮಾಡುವ ಪ್ರವೃತ್ತಿಯನ್ನು ಮೊದಲು ಬೆಳೆಸಿಕೊಳ್ಳಬೇಕು. ಇದರಿಂದ ಘನತೆ ಗೌರವಗಳು ತಾನಾಗಿಯೇ ಬರುತ್ತವೆ’ ಎಂದು ಪ್ರಾಚಾರ್ಯ ಸಂತೋಷ ಮೇಳಶೆಟ್ಟಿ ಅಭಿಪ್ರಾಯಪಟ್ಟರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರದ ವತಿಯಿಂದ ಕರ್ನಾಟಕ ಬಿಇಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅತಿಯಾದ ಮೊಬೈಲ್‌ ಬಳಕೆಯಿಂದಾಗಿ ಯುವ ಸಮುದಾಯದಲ್ಲಿ ಜಡತ್ವ ಹೆಚ್ಚಾಗಿದೆ. ಅಗತ್ಯಗುಣವಾಗಿ ಮೊಬೈಲ್‌ ಫೋನ್‌ ಬಳಕೆಯಾಗಬೇಕು. ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸಕಾರಾತ್ಮಕ ಚಿಂತನೆಗಳು ವ್ಯಕ್ತಿತ್ವ ರೂಪಿಸುವ ಕೆಲಸ ಮಾಡುತ್ತವೆ. ಈ ದಿಸೆಯಲ್ಲಿ ಸಕಾರಾತ್ಮಕ ಕಾರ್ಯಗಳನ್ನು ಮಾಡಬೇಕು’ ಎಂದರು.

ನಿಮ್ಹಾನ್ಸ್ ಕ್ಷೇತ್ರ ಸಂಪರ್ಕ ಅಧಿಕಾರಿ ಕೌಶಿಕ್‌ ‘ಜೀವನ ಕೌಶಲ’ ಕುರಿತು ಮಾತನಾಡಿದರು. ಎನ್‌ಎಸ್‌ಎಸ್‌ ಅಧಿಕಾರಿ ಪಾಂಡುರಂಗ ಕುಂಬಾರ ಹಾಗೂ ಯುವ ಪರಿವರ್ತಕಿ ಜೈಶ್ರೀ ಮೇತ್ರೆ ಮಾತನಾಡಿದರು.

ಯುವ ಸಮಾಲೋಚಕಿ ಸುಜಾತಾ ಗುಪ್ತಾ, ಯುವ ಪರಿವರ್ತಕ ಅಂಬರೀಷ್, ಕವಿತಾ ಸಂತೋಷ, ನೀಲಾಂಬಿಕಾ ಬಾಲಕಿಯರ ಪ್ರೌಢಾ ಶಾಲೆಯ ಮುಖ್ಯೋಪಾಧ್ಯಾಯ ರಾಜಕುಮಾರ, ಜಗನ್ನಾಥ ಕಮಲಾಪೂರೆ, ಆರತಿ, ದೀಪಕಕುಮಾರ ಇದ್ದರು. ರಶಿಕಾ ವಿಜಯಕುಮಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT