ಹುಮನಾಬಾದ್: ಭೂಮಿ ಮತ್ತು ಮನೆ ನಿವೇಶನ ನೀಡಲು ಸರ್ಕಾರ ತೀರ್ಮಾನ ತೆಗೆದುಕೊಳ್ಳುವುದು ಮೊದಲಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೂರಾರು ಕಾರ್ಯಕರ್ತರು ಸೋಮವಾರ ಸ್ಥಳೀಯ ತಹಸೀಲ್ದಾರ ಕಚೇರಿ ಪ್ರವೇಶ ದ್ವಾರ ಎದುರು ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿ, ಸಾರ್ವಜನಿಕರ ಕೆಲಸಗಳಿಗೆ ಅಡ್ಡಿ ಉಂಡು ಮಾಡಿದ್ದರಿಂದ ಪ್ರತಿಭಟನಾ ನಿರತ 300ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಹಳೆ ತಹಸೀಲ್ದಾರ ಕಚೇರಿಯಿಂದ ರ್ಯಾಲಿ ಮೂಲಕ ಮಿನಿವಿಧಾನಸೌಧ ಆಗಮಿಸಿದ ಪ್ರತಿಭಟನಾಕಾರರು ನೇರ ತಹಸೀಲ್ದಾರ ಕಚೇರಿ ನುಗ್ಗಿ, ತಹಸೀಲ್ದಾರ ಅವರ ಕೋಣೆ ಕುಳಿತುಕೊಂಡರು. ಪ್ರಮುಖರ ಮನವಿಯ ಮೇರೆಗೆ ತಹಸೀಲ್ದಾರ ಸಿ.ಲಕ್ಷ್ಮಣರಾವ ಅವರು ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿ ವರ ಮೂಲಕ ಮುಖ್ಯಮಂತ್ರಿ ಅವರಿಗೆ ತಲುಪಿಸುವುದಾಗಿ ಭರವಸೆ ನೀಡಿದ ಬಳಿಕ ಮರಳಿದ ಪ್ರತಿಭಟನಾ ನಿರತರು ಮತ್ತೆ ಪರವೇಶದ್ವಾರ ಎದುರಿಗೆ ಪ್ರತಿಭಟನೆ ಆರಂಭಿಸಿ, ಸಾರ್ವಜನಿಕ ಕೆಲಸಗಳಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ ಸಿ.ಲಕ್ಷ್ಮಣರಾವ ಅವರ ಆದೆಶದ ಮೇರೆಗೆ ಸರ್ಕಲ್ ಇನ್ಸ್ಪೆಕ್ಟರ್ ಎಂ.ಅನೀಲಕುಮಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಮೇತ್ರೆ, ಪ್ರಧಾನ ಕಾರ್ಯದರ್ಶಿ ಶಿವರಾಜ ಪಾಟೀಲ, ಕಾರ್ಯದರ್ಶಿ ಮೆಹೆತಾಬ್-ಅಲಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ಇಸಾಮುದ್ದೀನ್, ತಾಲ್ಲೂಕು ಸಂಚಾಲಕ ಖಾಜಾಸಾಬ್ ಸೇರಿಕಾರ ಸೇರಿ 300ಕ್ಕೂ ಅಧಿಕ ಮಂದಿಯನ್ನು ಬಂಧಿಸಿ, ಸಂಜೆ 5ಕ್ಕೆ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.