ಬೀದರ್: ಉತ್ತಮ ಬೆಳೆ ನಿರೀಕ್ಷಿಸಿದ್ದ ಜಿಲ್ಲೆಯ ರೈತರ ಆಸೆಗೆ ಆಲಿಕಲ್ಲು ಸಹಿತ ಮಳೆ ತಣ್ಣೀರೆರಚಿದೆ. ರೈತರು ಬಿಸಿಲು ನಿರೀಕ್ಷಿಸಿದ್ದರೂ, ಅದಕ್ಕೆ ವಿರುದ್ಧವಾಗಿ ಸುರಿದ ಮಳೆ, ಆಲಿಕಲ್ಲು ಸಾವಿರಾರು ರೈತರ ನೆಮ್ಮದಿಗೆ ಭಂಗ ತಂದಿದೆ. ಅಂದಾಜು 15,391 ಹೆಕ್ಟೇರ್ನಲ್ಲಿ ಕೃಷಿ ಬೆಳೆ, 2435 ಹೆಕ್ಟೆರ್ನಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ನಡೆಸಿದ ಸಮೀಕ್ಷೆ ಅನುಸಾರ, ಪ್ರಾಥಮಿಕ ಮಾಹಿತಿಯಂತೆ ಸುಮಾರು 52 ಕೋಟಿ ರೂಪಾಯಿ ಮೌಲ್ಯದ ಕೃಷಿ ಬೆಳೆ ಮತ್ತು 64.36 ಕೋಟಿ ಮೌಲ್ಯದ ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ.

ಆಲಿಕಲ್ಲು ಮಳೆ ಮತ್ತು ಕಳೆದ ಕೆಲವು ದಿನಗಳಿಂದ ಇರುವ ತಣ್ಣನೆಯ ವಾತಾವರಣ, ಇಬ್ಬನಿ ಸುರಿಯುವ ಸ್ಥಿತಿಯಿಂದಾಗಿ ಎಲೆಗಳು ಉದುರಿದ್ದು, ಫಲ ನೆಲಕಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಉತ್ತಮ ಫಸಲು ಹಾಗೂ ಲಾಭದ ಮಾತಿರಲಿ, ಹಾಕಿದ ಬಂಡವಾಳವೂ ವಾಪಸು ಬರುವುದೋ ಎಂಬ ಭೀತಿಯಲ್ಲಿ ಅನ್ನದಾತರಿದ್ದಾರೆ.

ಜಿಲ್ಲೆಯಲ್ಲಿ ಬಹುತೇಕ ಎಲ್ಲ ಗ್ರಾಮಗಳ ವ್ಯಾಪ್ತಿಯಲ್ಲಿ ಮಾರ್ಚ್ 3 ರಿಂದ 9ರ ಅವಧಿಯಲ್ಲಿ ಅಕಾಲಿಕ ಮಳೆ ಸುರಿದಿದೆ. ಸುಮಾರು 15 ಗ್ರಾಮಗಳ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಸುರಿದಿದ್ದು, ಉತ್ತಮವಾಗಿ ಬೆಳೆದಿದ್ದ ಫಸಲು, ಫಲ ನೆಲಕಚ್ಚಿವೆ. ಅಳಿದುಳಿದ ಬೆಳೆಯೂ ಹಾನಿಯಾಗಿದ್ದು, ಕೈಹಿಡಿಯುವ ಸಂಭವವಿಲ್ಲ.

ತೋಟಗಾರಿಕೆ ಬೆಳೆ ಹಾನಿ: ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಕುಲಕರ್ಣಿ ಅವರ ಪ್ರಕಾರ, ಮಳೆಯಿಂದಾಗಿ ಬಹುತೇಕ ಬೆಳೆ ಹಾನಿಯಾಗಿದೆ. ಇಬ್ಬನಿ, ಆಲಿಕಲ್ಲುನಿಂದಾಗಿ ಬೆಳೆ, ಎಲೆ ಉದುರಿರುವ ಕಾರಣ ಇರುವ ಬೆಳೆಯು ಕೈಗೆ ಸಿಗುವ ಸಂಭವ ಕಡಿಮೆ ಎನ್ನುತ್ತಾರೆ.

ಜಿಲ್ಲೆಯಲ್ಲಿ ಹುಮನಾಬಾದ್, ಬೀದರ್ ಮತ್ತು ಬಸವಕಲ್ಯಾಣ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಬೆಳೆಗಳ ಪಟ್ಟಿ ಮಾಡುವುದಾದರೆ ದ್ರಾಕ್ಷಿ, ಮಾವು, ದಾಳಿಂಬೆ, ಬಾಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿವೆ.

ಉಳಿದಂತೆ ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದ ಈರುಳ್ಳಿ, ಟೊಮಾಟೋ, ಹಸಿಮೆಣಸಿನಕಾಯಿ, ಕಲ್ಲಂಗಡಿ, ಬೆಂಡೆ ಮತ್ತು ಬದನೆಕಾಯಿ ಬೆಳೆಗಳು ಹಾನಿಯಾಗಿವೆ. ಪ್ರಮುಖ ಬೆಳೆಗಳ ಜೊತೆಗೆ ಅಲ್ಪಕಾಲಾವಧಿ ಬೆಳೆಯಾಗಿ ತರಕಾರಿಗಳನ್ನು ರೈತರು ಬೆಳೆಯುವ ಪದ್ಧತಿ ಇತ್ತು. ಆಲಿಕಲ್ಲು ಮಳೆ ಈ ಎಲ್ಲವನ್ನು ಹಾಳು ಮಾಡಿದೆ.

ನಾವು ಸಮೀಕ್ಷೆ ನಡೆಸಿ ತಾಲ್ಲೂಕುವಾರು ಅಂಕಿ ಅಂಶಗಳ ಜೊತೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಈಗ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆಗೆ ಪೂರಕವಾಗಿ ಜಮೀನಿನ ಸರ್ವೆ ಸಂಖ್ಯೆ ಆಧರಿಸಿ ಬೆಳೆ ಹಾನಿ ಅಂದಾಜು ಮಾಡಲಾಗುತ್ತಿದೆ ಎಂದರು. ತೋಟಗಾರಿಕೆ ಬೆಳೆಗಳಿಗೆ ಪ್ರಾಕೃತಿಕ ವಿಕೋಪ ಪರಿಹಾರದ ನಿಯಮಗಳ ಅನುಸಾರ ಪ್ರತಿ ಹೆಕ್ಟೇರ್ಗೆ ರೂ. 6000 ಪರಿಹಾರವನ್ನು ನೀಡಲು ಅವಕಾಶವಿದೆ ಎಂದು ತಿಳಿಸಿದರು.

ಕೃಷಿ ಬೆಳೆ ಹಾನಿ ಪ್ರಮಾಣ: ಇನ್ನೂಕೃಷಿ ಬೆಳೆ ಹಾನಿ ಪರಿಸ್ಥಿತಿಯೂ ಇದಕ್ಕಿಂತಲೂ ಭಿನ್ನವಾಗಿಲ್ಲ. ಜಂಟಿ ಕೃಷಿ ನಿರ್ದೇಶಕ ಜಿ.ಟಿ.ಪುತ್ರಾ ಅವರ ಪ್ರಕಾರ, ಇನ್ನೂ ಸಮೀಕ್ಷೆ ಪೂರ್ಣಗೊಂಡಿಲ್ಲ. ಪ್ರಾಥಮಿಕ ಮಾಹಿತಿ ಅನುಸಾರ ಒಟ್ಟು15,391 ಹೆಕ್ಟೇರ್ನಲ್ಲಿ ಬೆಳೆಹಾನಿಯಾಗಿದ್ದು, ಸಮೀಕ್ಷೆ ಪೂರ್ಣಗೊಂಡ ನಂತರ ಇನ್ನು ಹೆಚ್ಚಬಹುದು.

ಕೃಷಿ ಬೆಳೆ ಹಾನಿಯನ್ನು ಗಮನಿಸಿದರೆ ಪ್ರಾಥಮಿಕ ಸಮೀಕ್ಷೆಯ ಅನುಸಾರ, ಬೀದರ್ ತಾಲ್ಲೂಕಿನಲ್ಲಿ 2,158 ಹೆಕ್ಟೇರ್, ಹುಮನಾಬಾದ್ ತಾಲ್ಲೂಕು 1,855 ಹೆಕ್ಟೇರ್, ಬಸವಕಲ್ಯಾಣ 1050 ಹೆಕ್ಟೇರ್, ಭಾಲ್ಕಿ 5,699 ಹೆಕ್ಟೇರ್, ಔರಾದ್ ತಾಲ್ಲೂಕುನಲ್ಲಿ 4,629 ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ.

ಬೆಳೆವಾರು ಗಮನಿಸಿದರೆ ಜೋಳ ಬೆಳೆಯು ಹೆಚ್ಚು ಪ್ರಮಾಣದಲ್ಲಿ ಅಂದರೆ 8,230 ಹೆಕ್ಟೇರ್ನಲ್ಲಿ ನಷ್ವವಾಗಿದೆ. ಆಲಿಕಲ್ಲು, ಇಬ್ಬನಿಯಿಂದಾಗಿ ಅಳಿದುಳಿದ ಬೆಳೆಯು ಕಪ್ಪು ಬಣ್ಣಕ್ಕೆ ತಿರುಗಿದ್ದು, ಕೈಗೆ ಬರುವ ಸಂಭವ ಕಡಿಮೆ ಎನ್ನಲಾಗಿದೆ.

ಉಳಿದಂತೆ ಕಡಲೆ 2,972 ಹೆಕ್ಟೇರ್, ಗೋಧಿ ಬೆಳೆ 1,099 ಹೆಕ್ಟೇರ್, ಕಬ್ಬು ಬೆಳೆ 746 ಹೆಕ್ಟೇರ್ ಹಾಗೂ ಕುಸುಬೆ, ತೊಗರಿ ಸೇರಿದಂತೆ ಇತರೆ ಬೆಳೆಗಳು ಒಟ್ಟು 2,344 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ.

ಈ ಮಾಹಿತಿಗಳು ಅಂದಾಜು ಅಂಕಿ ಅಂಶವಾಗಿದ್ದು, ಕಂದಾಯ ಇಲಾಖೆ ಜೊತೆಗೂಡಿ ಸರ್ವೆ ಸಂಖ್ಯೆ ಆಧರಿಸಿ ಸಮೀಕ್ಷೆ ಅಂತಿಮಗೊಂಡ ನಂತರ ನಿಖರ ಪ್ರಮಾಣ ಸಿಗಲಿದೆ. ಆಗ ನಷ್ಟದ ಪ್ರಮಾಣ ಇನ್ನು ಸ್ವಲ್ಪ ಹೆಚ್ಚಬಹುದು.

‘ಸರ್ಕಾರಕ್ಕೆ ವರದಿ ಕಳುಹಿಸಿದೆ’
‘ತೋಟಗಾರಿಕೆ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಪ್ರಾಥಮಿಕ ಸಮೀಕ್ಷೆ ಅನುಸಾರ 2435 ಹೆಕ್ಟೇರ್. ಸಮೀಕ್ಷೆ ಪೂರ್ಣಗೊಂಡ ಬಳಿಕ ಇನ್ನೂ ಜಾಸ್ತಿ ಆಗಬಹುದು. ಸದ್ಯದ ಅಂದಾಜಿನಂತೆ ₨ 64.36 ಕೋಟಿ ಮೌಲ್ಯದ ಕೃಷಿಬೆಳೆ ನಷ್ಟವಾಗಿದ್ದು, ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ’.
–ಪಿ.ಎಸ್.ಕುಲಕರ್ಣಿ, ತೋಟಗಾರಿಕೆ ಉಪ ನಿರ್ದೇಶಕರು

‘ಸಮೀಕ್ಷೆ ನಡೆದಿದೆ’
‘ಜಂಟಿ ಸಮೀಕ್ಷೆ ಇನ್ನೂ ನಡೆಯುತ್ತಿದ್ದು, ಇನ್ನು ಎರಡು ದಿನದಲ್ಲಿ ಮುಗಿಯಬಹುದು. ಸರ್ವೇ ಸಂಖ್ಯೆ ಆಧರಿಸಿ ಸಮೀಕ್ಷೆ ನಡೆಸಲಿದ್ದು, ನಷ್ಟದ ಪ್ರಮಾಣ ಆಧರಿಸಿ ಪರಿಹಾರ ನೀಡಲಾಗುತ್ತದೆ. 15 ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಮಳೆ ಸಾಕಷ್ಟು ಸುರಿದಿದೆ. ಬಹುತೇಕ ಎಲ್ಲ ಗ್ರಾಮಗಳಲ್ಲಿ ಅಕಾಲಿಕ ಮಳೆಯಾಗಿದ್ದು, ನಷ್ಟ ಹೆಚ್ಚಿದೆ’.
–ಜಿ.ಟಿ.ಪುತ್ರಾ, ಜಂಟಿ ಕೃಷಿ ನಿರ್ದೇಶಕರು.

‘15 ಗ್ರಾಮಗಳಲ್ಲಿ ಆಲಿಕಲ್ಲು ಮಳೆಯ ಅಬ್ಬರ’
ಬೀದರ್: ಬೀದರ್ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಾರ್ಚ್ ಮೊದಲ ವಾರ ಬಿಸಿಲು ಇರುತ್ತದೆ. ಆದರೆ, ಈ ವರ್ಷ ಮಾರ್ಚ್ 3 ರಿಂದ 9ರ ನಡುವಣ ಅವಧಿಯಲ್ಲಿ ಸರಾಸರಿ 61.8 ಮಿ.ಮೀ. ಮಳೆಯಾಗಿದೆ. ಆಲಿಕಲ್ಲು ಮಳೆ ಸುರಿದಿರುವ ಕಾರಣ ಬೆಳೆ ಹಾನಿ ಪ್ರಮಾಣವೂ ಹೆಚ್ಚಾಗಿದೆ.

ಲಭ್ಯ ಮಾಹಿತಿ ಪ್ರಕಾರ ತಾಲ್ಲೂಕುವಾರು ಔರಾದ್ ಮತ್ತು ಭಾಲ್ಕಿ ತಾಲ್ಲೂಕಿನಲ್ಲಿ ಈ ಅವಧಿಯಲ್ಲಿ ಗರಿಷ್ಠ ಪ್ರಮಾಣದ ಮಳೆಯಾಗಿದೆ. ಔರಾದ್ ತಾಲ್ಲೂಕಿನಲ್ಲಿ ಎಂಟು ದಿನದ ಈ ಅವಧಿಯಲ್ಲಿ 72.8 ಮಿ.ಮೀ. ಮಳೆಯಾಗಿದೆ.
ಭಾಲ್ಕಿ ತಾಲ್ಲೂಕಿನಲ್ಲಿ 60.2 ಮಿ.ಮೀ. ಮಳೆಯಾಗಿದ್ದರೆ, ಬೀದರ್ ತಾಲ್ಲೂಕಿನಲ್ಲಿ 59.1 ಮಿ.ಮೀ., ಬಸವಕಲ್ಯಾಣ ತಾಲ್ಲೂಕಿನಲ್ಲಿ 58.9 ಮಿ.ಮೀ ಹಾಗೂ ಹುಮನಾಬಾದ್ತಾಲ್ಲೂಕಿನಲ್ಲಿ 58 ಮಿ.ಮೀ. ಮಳೆಯಾಗಿದೆ.

ಆಲಿಕಲ್ಲು ಮಳೆ: ತಾಲ್ಲೂಕುವಾರು ಬೀದರ್ ತಾಲ್ಲೂಕಿನ ಬಗದಲ್, ಬೈರಹಳ್ಳಿ, ಹುಮನಾಬಾದ್ ತಾಲ್ಲೂಕಿನ ಅಲ್ಲೂರ, ನಿಂಬುರ, ಸೀತಳಗೇರಾ, ಗಡವಂತಿ, ಮೊಳಕೇರಾ, ಬಸವಕಲ್ಯಾಣ ತಾಲ್ಲೂಕಿನ ಧನ್ನೂರಾ (ಕೆ), ಗೌರ, ಔರಾದ್ ತಾಲ್ಲೂಕಿನ ಡೋಣಗಾಂವ (ಎಂ), ರಂಡ್ಯಾಳ, ಕೊಟಗ್ಯಾಳ ಮತ್ತು ಭಾಲ್ಕಿ ತಾಲ್ಲೂಕಿನ ಹಾಲ ಹಿಪ್ಪರ್ಗಾ, ಕೋಸಮ್, ನಾಗುರಾ ಗ್ರಾಮಗಳ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.