ಶುಕ್ರವಾರ, ಏಪ್ರಿಲ್ 23, 2021
31 °C

ಜಯತೀರ್ಥರ ಪುಣ್ಯದಿನ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸೋಮವಾರ ಟೀಕಾಕೃತ್ಪಾದರ ಪುಣ್ಯ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಬೆಳಿಗ್ಗೆ ಗುರುಸಾರ್ವಭೌಮರ ಅಷ್ಟೋತ್ತರ, ಬಳಿಕ ವೃಂದಾವನಕ್ಕೆ ಫಲ ಪಂಚಾಮೃತ, ಅಲಂಕಾರ, ಮಹಾಪೂಜೆ ಜರುಗಿದವು.

ಜಯತೀರ್ಥರ ಭಾವಚಿತ್ರಕ್ಕೆ ಹೂಮಾಲೆಗಳಿಂದ ಅಲಂಕರಿಸಿ ನಮಿಸಲಾಯಿತು. ನಂತರ ಶ್ರೀ ಮಠದ ಒಳ ಆವರಣದಲ್ಲಿ ರಥೋತ್ಸವ ಜರುಗಿತು. ರಥೋತ್ಸವ ಸಮಯದಲ್ಲಿ ದೇವರ ನಾಮ ಸ್ಮರಣೆ ಮಾರ್ದನಿಸಿದವು.

ಇದೇ ಸಂದರ್ಭದಲ್ಲಿ ಟೀಕಾರಾಯರು ಮಾಧ್ವ ಪರಂಪರೆಗೆ ನೀಡಿದ ಕೊಡುಗೆ ಕುರಿತು ಶ್ರೀ ಕೃಷ್ಣ ಮಠದ ಅರ್ಚಕ ಪಂಡಿತ ಸಮೀರಾಚಾರ್ಯ ಪ್ರವಚನ ನೀಡಿದರು.

ಬೆಳಿಗ್ಗೆಯಿಂದಲೇ ಭಕ್ತರು ಶ್ರೀಮಠಕ್ಕೆ ಬಂದು ವೃಂದಾವನದ ದರ್ಶನ ಪಡೆದು ಪುನೀತರಾದರು.

ಮಠದ ಅರ್ಚಕರಾದ ರವಿ ಆಚಾರ್ಯ, ಶ್ರೀಧರಾಚಾರ್ಯರು, ಯುವ ವೈದಿಕರಾದ ಪವಮಾನ ಮುತ್ತಗಿ, ಶ್ರೀಧರ ಜೋಶಿ (ಮುತ್ತಗಿ) ಅವರು ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿರುವುದು ಗಮನ ಸೆಳೆಯಿತು.

ಶ್ರೀಮಠದ ವಿಚಾರಣಕರ್ತಾ ಗೋಪಾಲ ನಾಯಕ ನೇತೃತ್ವದಲ್ಲಿ ವಿ.ಬಿ.ಕುಲಕರ್ಣಿ, ಶ್ರೀಕೃಷ್ಣ ಪಡಗಾನೂರ, ಆರ್.ಆರ್.ಕುಲಕರ್ಣಿ, ಕೃಷ್ಣ ಬೀಡಕರ, ಜಿ.ಎಸ್. ಕುಲಕರ್ಣಿ (ಇಂಗಳಗಿ), ಬಂಡಾಚಾರ್ಯ ಜೋಶಿ (ಕೂಡಗಿ), ರಾಘವೇಂದ್ರ ವಾರಕರಿ, ಪ್ರಕಾಶ ಬಿಜಾಪುರ, ವಿ.ಡಿ.ಜೋಶಿ, ಗುರುರಾಜ ಸೊಂಡೂರ, ಆರ್.ಎ.ದೇಶಪಾಂಡೆ, ಮೋಹನ ಕೌತಾಳ, ನರಗುಂದಕರ, ಅಶೋಕ ಮರಳಿ ಇದ್ದರು.

ಉತ್ತರಾದಿ ಮಠ: ಇಲ್ಲಿಯ ಉತ್ತರಾದಿ ಮಠದಲ್ಲಿ ಸಹ ಟೀಕಾಕೃತ್ಪಾದರ ಪುಣ್ಯ ದಿನವನ್ನು ಆಚರಿಸಲಾಯಿತು.

ಬೆಳಿಗ್ಗೆ ವೃಂದಾವನಕ್ಕೆ ಪಂಚಾಮೃತ ಅಲಂಕಾರ ಜರುಗಿತು. ಬಳಿಕ ವೇದ ಪಂಡಿತರಿಂದ ಟೀಕಾರಾಯರ ಸ್ತೋತ್ರ ಪಾರಾಯಣ, ಬ್ರಾಹ್ಮಣರ ಅಲಂಕಾರ ಸೇವೆ ನಡೆದವು. ಮಹಾ ಮಂಗಳಾರತಿ, ರಥೋತ್ಸವ, ಯುವ ಪಂಡಿತರಿಂದ ಪ್ರವಚನ ನಡೆದವು.

ಶ್ರೀಮಠದ ಕಾರ್ಯದರ್ಶಿ ಮಧ್ವಾಚಾರ್ಯ ಕಾವಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.