ಗುರುವಾರ , ಜೂನ್ 17, 2021
28 °C
49 ಮಂದಿ ಗುಣಮುಖ, 39 ಜನರಿಗೆ ಸೋಂಕು, 413 ಸಕ್ರಿಯ ಪ್ರಕರಣಗಳು

ಚಾಮರಾಜನಗರ: ಕೊರೊನಾದಿಂದ ಚೇತರಿಕೆ ಕಂಡವರ ಸಂಖ್ಯೆ ಹೆಚ್ಚಳ, ಕುಗ್ಗಿದ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ ಕೋವಿಡ್‌ನಿಂದ 49 ಮಂದಿ ಗುಣಮುಖರಾಗಿದ್ದರೆ, 39 ಮಂದಿಗೆ ಸೋಂಕು ತಗುಲಿರುವುದು ಖಚಿತ ಪಟ್ಟಿದೆ. 

ಒಂದು ಸಾವಿನ ಪ್ರಕರಣ ವರದಿಯಾಗಿದೆ. ಇವರು 14ರಂದೇ ಮೃತಪಟ್ಟಿದ್ದಾರೆ. 15ರಂದು ಕೋವಿಡ್‌ ಇರುವುದು ದೃಢಪಟ್ಟಿದೆ. ಜಿಲ್ಲಾಡಳಿತ ಸೋಮವಾರದ ವರದಿಯಲ್ಲಿ ಮೃತಪಟ್ಟವರ ವಿವರ ನೀಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿದೆ. ಕೋವಿಡ್‌ ಇದ್ದರೂ, ಬೇರೆ ಕಾರಣಗಳಿಂದಾಗಿ 12 ಜನರು ಪ್ರಾಣಕಳೆದುಕೊಂಡಿದ್ದಾರೆ. 

ಕೊಳ್ಳೇಗಾಲ ಪಟ್ಟಣದ 60 ವರ್ಷದ ಪುರುಷ (ರೋಗಿ ಸಂಖ್ಯೆ 2,29,176) ಅಸ್ತಮಾ ಮತ್ತು ಮಧುಮೇಹದಿಂದ ಬಳಲುತ್ತಿದ್ದರು. ಆಗಸ್ಟ್‌ 14ರಂದು ಇವರು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಸಂಜೆ 6.30ಕ್ಕೆ ಮೃತಪಟ್ಟಿದ್ದರು. ಆ ಬಳಿಕ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿತ್ತು. 15ರಂದು ಕೋವಿಡ್‌ ಇರುವುದು ದೃಢಪಟ್ಟಿತ್ತು.  

ಸೋಮವಾರದ 39 ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಈವರೆಗೆ 1,640 ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. 49 ಮಂದಿ ಸೋಂಕು ಮುಕ್ತರಾದವರೂ ಸೇರಿದಂತೆ ಗುಣಮುಖರಾದವರ ಸಂಖ್ಯೆ 1,196ಕ್ಕೆ ಏರಿದೆ. 413 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 149 ಹೋಂ ಐಸೊಲೇಷನ್‌ನಲ್ಲಿದ್ದಾರೆ. ಸೋಮವಾರ 15 ಮಂದಿ ಹೋಂ ಐಸೊಲೇಷನ್‌ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

ಕಡಿಮೆಯಾದ ಪರೀಕ್ಷೆ

ಸೋಮವಾರ ಜಿಲ್ಲೆಯಲ್ಲಿ 292 ಮಂದಿಯ ಗಂಟಲು ದ್ರವ ಮಾದರಿಗಳ ‍ಪರೀಕ್ಷೆ ನಡೆಸಲಾಗಿದೆ. 38 ಮಂದಿಯ ವರದಿ ಪೊಸಿಟಿವ್‌ ಬಂದು, 254 ವರದಿಗಳು ನೆಗೆಟಿವ್‌ ಬಂದಿದೆ. ಇನ್ನೊಂದು ಪ್ರಕರಣ ಮೈಸೂರಿನಲ್ಲಿ ದೃಢಪಟ್ಟಿದೆ. 

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಒಂದು ದಿನದಲ್ಲಿ ಇಷ್ಟು ಕಡಿಮೆ ಪರೀಕ್ಷೆ ನಡೆದಿರುವುದು ಇದೇ ಮೊದಲು.

39 ಸೋಂಕಿತರಲ್ಲಿ ಚಾಮರಾಜನಗರ ತಾಲ್ಲೂಕಿನ 22, ಕೊಳ್ಳೇಗಾಲದ 10 ಮಂದಿ, ಗುಂಡ್ಲುಪೇಟೆಯ ಐ‌ದು, ಹನೂರು ತಾಲ್ಲೂಕಿನ ಒಬ್ಬರು ಹಾಗೂ ಹೊರ ಜಿಲ್ಲೆಯ ಒಬ್ಬರು ಇದ್ದಾರೆ. 

ಗುಣಮುಖರಾದವರಲ್ಲಿ ಕೊಳ್ಳೇಗಾಲ ತಾಲ್ಲೂಕಿನ 21, ಯಳಂದೂರಿನ 11, ಚಾಮರಾಜನಗರದ 10, ಗುಂಡ್ಲುಪೇಟೆ ತಾಲ್ಲೂಕಿನ 7 ಮಂದಿ ಇದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು