ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕೊರೊನಾ ಪ್ರಕರಣಗಳ ಸಂಖ್ಯೆ ದಿಢೀರ್‌ ಹೆಚ್ಚಳ

ಕೋವಿಡ್‌–19: 85 ಮಂದಿಗೆ ಸೋಂಕು, ಒಂದೇ ದಿನ ದಾಖಲೆಯ 916 ಪರೀಕ್ಷೆಗಳು
Last Updated 2 ಸೆಪ್ಟೆಂಬರ್ 2020, 15:29 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ಕೋವಿಡ್‌ ಪ್ರಕರಣಗಳಲ್ಲಿ ದಿಢೀರ್‌ ಏರಿಕೆಯಾಗಿದೆ. ಒಂದೇ ದಿನ ದಾಖಲೆ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದೆ.

10 ದಿನಗಳಿಂದ ಪ್ರತಿ ದಿನ 50ರ ಆಸುಪಾಸಿನಲ್ಲಿ ದೃಢಪಡುತ್ತಿದ್ದ ಪ್ರಕರಣಗಳು ಬುಧವಾರ 85ಕ್ಕೆ ಏರಿದೆ. 55 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಕರಣ ವರದಿಯಾಗಿಲ್ಲ.

ಜಿಲ್ಲೆಯಲ್ಲಿ ಈವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 2,491ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 1,907ಕ್ಕೆ ಹಿಗ್ಗಿದೆ. 535 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 161 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 15 ಮಂದಿ ಐಸಿಯುನಲ್ಲಿದ್ದಾರೆ. ಇದುವರೆಗೆ 49 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಕೋವಿಡ್‌ ಕಾರಣದಿಂದ 32 ಹಾಗೂ ಅನ್ಯ ಕಾರಣಗಳಿಂದ 17 ಮಂದಿ ಪ್ರಾಣಕಳೆದುಕೊಂಡಿದ್ದಾರೆ.

ಬುಧವಾರ ಒಂದೇ ದಿನ 916 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. 374 ಪರೀಕ್ಷೆಗಳನ್ನು ಆರ್‌ಟಿಪಿಸಿಆರ್‌ ಪ್ರಯೋಗಾಲಯದಲ್ಲಿ ನಡೆಸಲಾಗಿದ್ದರೆ, ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ 520, ಟ್ರು ನಾಟ್‌ ವಿಧಾನದಲ್ಲಿ 22 ಪರೀಕ್ಷೆಗಳನ್ನು ಮಾಡಲಾಗಿದೆ. 831 ಮಂದಿಯ ವರದಿಗಳು ನೆಗೆಟಿವ್‌ ಬಂದಿವೆ.

ದೃಢಪಟ್ಟ 85 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 28, ಕೊಳ್ಳೇಗಾಲದ 25, ಗುಂಡ್ಲುಪೇಟೆಯ 24, ಯಳಂದೂರಿನ ಏಳು ಹಾಗೂ ಹನೂರು ತಾಲ್ಲೂಕಿನ ಒಂದು ಪ್ರಕರಣಗಳು ಸೇರಿವೆ. ಗುಣಮುಖರಾದ 55 ಜನರಲ್ಲಿ ಚಾಮರಾಜನಗರ ತಾಲ್ಲೂಕಿನ 29, ಗುಂಡ್ಲುಪೇಟೆಯ 15, ಕೊಳ್ಳೇಗಾಲದ ಆರು ಹಾಗೂ ಯಳಂದೂರು ತಾಲ್ಲೂಕಿನ ಐವರು ಇದ್ದಾರೆ.

535 ಸಕ್ರಿಯ ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 170, ಕೊಳ್ಳೇಗಾಲ ತಾಲ್ಲೂಕಿನಲ್ಲಿ 142, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 123, ಯಳಂದೂರು 47 ಹಾಗೂ ಹನೂರು ತಾಲ್ಲೂಕಿನ 53 ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT