ಮಂಗಳವಾರ, ಮಾರ್ಚ್ 9, 2021
30 °C

ತಪ್ಪಿದ ಅಪಘಾತ: 40 ಮಂದಿ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಿಂದ ಅನೇಕಲ್‌ಗೆ ತೆರಳುತ್ತಿದ್ದ ಸರ್ಕಾರಿ ಬಸ್ ಭಾನುವಾರ ಎದುರಿನಿಂದ ಬಂದ ಕಾರಿಗೆ ಜಾಗ ಬಿಡಲು ರಸ್ತೆ ಪಕ್ಕಕ್ಕೆ ಚಲಿಸಿದಾಗ ಜಾರಿ ವಾಲಿ ನಿಂತಿದೆ. ಇದರಿಂದ 40ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದಾರೆ.

‘ಹೊಸದಾಗಿ ಬೆಟ್ಟದ ರಸ್ತೆಯ ತಿರುವುಗಳಲ್ಲಿ ವಾಹನ ಚಲಾಯಿಸುವ ಚಾಲಕರು ಎಚ್ಚರ ವಹಿಸಬೇಕು. ದೊಡ್ಡ ವಾಹನಗಳು ಬರುವಾಗ ಅಗಲವಾದ ರಸ್ತೆಯಲ್ಲಿ ನಿಂತು ಹೊರಡಬೇಕು. ಏಕಾಏಕಿ ಕಾರು ಬಂದಾಗ ಬಸ್ ಚಾಲಕ ಅಪಘಾತ ತಪ್ಪಿಸಲು ರಸ್ತೆ ಬದಿಗೆ ಬಂದಾಗ ಕೊರಕಲಿಗೆ ಇಳಿದು ನಿಂತಿದೆ. ಇದರಿಂದ ದೊಡ್ಡ ಅಪಘಾತ ತಪ್ಪಿದೆ’ ಎಂದು ಪೊಲೀಸರು ತಿಳಿಸಿದರು.

ಪಿಎಸ್ಐ ಶಿವಕುಮಾರ್ ಮತ್ತು ಉಸ್ಮಾನ್ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್‌ನಿಂದ ಇಳಿಸಿ, ಗ್ರಾಮಗಳತ್ತ ತೆರಳಲು ನೆರವಾದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು