ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶವಂತರಾವ್ ಅಂಬೇಡ್ಕರ್ ಅವರು ತಾಲ್ಲೂಕಿನ ಹೆಗ್ಗವಾಡಿಯ ಧ್ರುವನಾರಾಯಣ ಮನೆಗೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.

ಪತ್ನಿ ವೀಣಾ, ಮಕ್ಕಳಾದ ದರ್ಶನ್ ಹಾಗೂ ಧೀರೇನ್ ಅವರಿಗೆ ಧೈರ್ಯ ತುಂಬಿದ ಯಶವಂತರಾವ್, ‘ಧ್ರುವನಾರಾಯಣ ಬಹಳ ಸಜ್ಜನಿಕೆಯುಳ್ಳ ಅದರ್ಶ ರಾಜಕಾರಣಿಯಾಗಿದ್ದರು. ಕ್ರಿಯಾಶೀಲರಾಗಿ ಎಲ್ಲ ವರ್ಗದ ಜನರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು. ಅವರ ಅಕಾಲಿಕ ನಿಧನ ಕುಟುಂಭಕ್ಕೆ ಅಷ್ಟೇ ಅಲ್ಲ ಸಮಾಜಕ್ಕು ತುಂಬಲಾರದ ನಷ್ಟವಾಗಿದೆ’ ಎಂದು ಕಂಬಿನಿ ಮಿಡಿದರು.

ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು), ವಕೀಲರಾದ ಪುಟ್ಟಸ್ವಾಮಿ ರಾಮಸಮುದ್ರ, ಗಂಗಾಧರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.