ಹನೂರು: ತಾಲ್ಲೂಕಿನ ದಿನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಜುನ್ ದೊಡ್ಡಿ ಗ್ರಾಮದ ಸಕ್ರಿನಾಯ್ಕ ಎಂಬುವರ ಜಮೀನಿಗೆ ಕಾಡಾನೆಗಳ ಹಿಂಡು ನುಗ್ಗಿ ಎರಡೂವರೆ ಎಕರೆ ಬಾಳೆ ಫಸಲನ್ನು ನಾಶಗೊಳಿಸಿದೆ.

ಮಂಗಳವಾರ ತಡರಾತ್ರಿ ಕಾಡಾನೆಗಳು ಜಮೀನಿಗೆ ನುಗ್ಗಿ ಫಸಲನ್ನು ತಿಂದು ನಾಶ ಮಾಡಿವೆ. ವರ್ಷದಿಂದ ಕಾಪಾಡಿಕೊಂಡು ಬಂದಿದ್ದ ಫಸಲು ಕಟಾವು ಸಂದರ್ಭದಲ್ಲಿ ಕಾಡಾನೆಗಳ ಪಾಲಾಗಿರುವುದರಿಂದ ರೈತ ಸಂಕಷ್ಟಕ್ಕೀಡಾಗಿದ್ದಾರೆ.

ಈ ಭಾಗದಲ್ಲಿ ಕಾಡಾನೆ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಪ್ರಾಣ ಭಯದಲ್ಲಿ ರೈತರು ಕಾಲ ದೂಡುತ್ತಿದ್ದಾರೆ. ಕಾಡಾನೆ ಉಪಟಳ ತಪ್ಪಿಸಿ ಆಗಿರುವ ಅನಾಹುತಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.