ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: 4,520 ಎಕರೆ ಅರಣ್ಯ ಒತ್ತುವರಿ

ತೆರವಿಗೆ ಕ್ರಮ–ಅರಣ್ಯ ಅಧಿಕಾರಿಗಳು
Last Updated 3 ಮಾರ್ಚ್ 2020, 19:04 IST
ಅಕ್ಷರ ಗಾತ್ರ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಿವಿಧ ವಲಯಗಳಲ್ಲಿ ಒಟ್ಟಾರೆ 4,520 ಎಕರೆ ಅರಣ್ಯ ಒತ್ತುವರಿಯಾಗಿದೆ ಎಂದು ಹೇಳಲಾಗುತ್ತಿದ್ದು, 1,121 ಪ‍್ರಕರಣಗಳನ್ನು ಅರಣ್ಯ ಇಲಾಖೆ ಗುರುತಿಸಿದೆ.

‘ಕೆಲವು ಕಡೆಗಳಲ್ಲಿ ಒತ್ತುವರಿಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಈಗಾಗಲೇ ಕ್ರಮ ಕೈಗೊಂಡಿದ್ದು, ಮದ್ದೂರು ವಲಯದಲ್ಲಿ ಎಂಟು ಪ್ರಕರಣಗಳಲ್ಲಿ 63 ಎಕರೆಯಷ್ಟನ್ನು ತೆರವುಗೊಳಿಸಲಾಗಿದೆ’ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಟಿ.ಬಾಲಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒತ್ತುವರಿ ಪ್ರಕರಣಗಳು ಈಗಿನದ್ದಲ್ಲ. ಹಲವು ವರ್ಷಗಳ ಹಿಂದೆಯೇ ಆಗಿರುವಂತಹದ್ದು. ಗಮನಕ್ಕೆ ಬಂದಾಗಲೆಲ್ಲ ಪ್ರಕರಣ ದಾಖಲಿಸಿಕೊಂಡು ಒತ್ತುವರಿ ತೆರವುಗೊಳಿಸಲು ಇಲಾಖೆ ಕ್ರಮ ವಹಿಸುತ್ತಿದೆ’ ಎಂದು ಹೇಳಿದರು.

‘ಒತ್ತುವರಿಯಾದ ಪ್ರದೇಶಗಳೆಲ್ಲವೂ ಮೀಸಲು ಅರಣ್ಯಕ್ಕೆ ಸೇರಿದ್ದು, ಕಂದಾಯ ಭೂಮಿಗೆ ಹೊಂದಿಕೊಂಡಿವೆ. ಬಹುಪಾಲು ಇವು ಕಾಡಂಚಿನ ಪ್ರದೇಶಗಳು‌’ ಎಂದು ಮಾಹಿತಿ ನೀಡಿದರು.

ಉನ್ನತಮಟ್ಟದಲ್ಲಿ ಆಗಬೇಕು: ಒತ್ತುವರಿ ತೆರವುಗೊಳಿಸುವ ಸಂಬಂಧ ಉನ್ನತ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ. ಮೂರು ಎಕರೆವರೆಗೆ ಒತ್ತುವರಿಯಾಗಿದ್ದರೆ, ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಸರ್ಕಾರವೇ ಹೇಳಿದೆ. ಹೀಗಾಗಿ, ಉನ್ನತ ಮಟ್ಟದಿಂದಲೇ ಸ್ಪಷ್ಟ ಸೂಚನೆ ಬರಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT