ಚಾಮರಾಜನಗರ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ನಾನು ಬಿಜೆಪಿ ಟಿಕೆಟ್ ಬಯಸಿದ್ದು, ಪಕ್ಷದ ವರಿಷ್ಠರು ನನಗೆ ಅವಕಾಶ ನೀಡಬೇಕು. ಇಡೀ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಪಕ್ಷವನ್ನೂ ಸಂಘಟಿಸುವೆ’ ಎಂದು ತಿ.ನರಸೀಪುರ ಪುರಸಭಾ ಸದಸ್ಯ, ಚಿತ್ರನಟ ಆರ್.ಅರ್ಜುನ್ ರಮೇಶ್ ಮಂಗಳವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘15 ವರ್ಷಗಳಿಂದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ತಿ.ನರಸೀಪುರದ ಪುರಸಭೆಗೆ ಅತ್ಯಧಿಕ ಮತಗಳಿಂದ ಗೆದ್ದು ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಕಿರುತೆರೆ, ಹಿರಿ ತೆರೆನಟನಾಗಿ ರಾಜ್ಯದಾದ್ಯಂತ ಗುರುತಿಸಿಕೊಂಡಿದ್ದೇನೆ’ ಎಂದರು.

‘ನಾನು ರಾಜಕೀಯ ಕುಟುಂಬದಿಂದಲೇ ಬಂದಿದ್ದೇನೆ. ನನ್ನ ತಂದೆ ಸಿ.ರಮೇಶ್ ಅವರು ಕಾಡಾ ಅಧ್ಯಕ್ಷರಾಗಿದ್ದವರು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದರು. ನಮ್ಮ ಕುಟುಂಬದವರಾದ ಎನ್.ರಾಚಯ್ಯ, ಟಿ.ಎನ್.ನರಸಿಂಹಮೂರತಿ, ವೈ.ರಾಮಕೃಷ್ಣ ಸಚಿವರಾಗಿದ್ದವರು. ಹಾಗಾಗಿ, ರಾಜಕೀಯವಾಗಿಯೂ ಎಲ್ಲರಿಗೂ ನನ್ನ ಪರಿಚಯ ಇದೆ’ ಎಂದರು.

‘ಪಕ್ಷದ ಪರವಾಗಿ ನಿರಂತರವಾಗಿ ಕೆಲಸ ಮಾಡಿಕೊಂಡು ಇದ್ದೇನೆ. ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಬೇಕು ಎಂಬ ಆಸೆ ಇದೆ. ಈಗಾಗಲೇ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿ ನನಗೊಂದು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೇನೆ. ತಿ.ನರಸೀಪುರ ಕ್ಷೇತ್ರದಲ್ಲಿ ಜನಸಂಪರ್ಕ ಕಚೇರಿ ತೆರೆದು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾ ಬಂದಿದ್ದೇನೆ. ಸೇವೆ ಮಾಡಬೇಕು ಎಂಬ ಹಂಬಲದಿಂದ ರಾಜಕೀಯಕ್ಕೆ ಬಂದಿದ್ದೇನೆ’ ಎಂದರು.

‘ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಪರಿಶಿಷ್ಟ ಜಾತಿ ಎಡಗೈ ಸಮುದಾಯದಿಂದ ಯಾರೂ ಗೆದ್ದಿಲ್ಲ. ರಾಜಕೀಯ ಪಕ್ಷಗಳು ಟಿಕೆಟ್ ಕೂಡ ನೀಡಿಲ್ಲ. ಬಿಜೆಪಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಸ್ಪರ್ಧೆಗೆ ಅವಕಾಶ ಇದೆ. ನಮ್ಮ ಕುಟುಂಬ ಪಕ್ಷಕ್ಕೆ ನಿಷ್ಠವಾಗಿದ್ದು, ಟಿಕೆಟ್ ಸಿಕ್ಕಿದರೂ, ತಪ್ಪಿದರೂ ಕೊನೆವರೆಗೂ ಪಕ್ಷದಲ್ಲೇ ಇರುತ್ತೇನೆ’ ಎಂದು ಅರ್ಜುನ್ ಹೇಳಿದರು.

ಮುಖಂಡರಾದ ಬಿ.ಎಲ್.ಮಹದೇವ, ಸಿ.ಡಿ.ವೆಂಕಟೇಶ್, ರಾಜುಗೌಡ, ಮಹೇಶ್, ಶಿವಕುಮಾರ್, ಮಹೇಶ್ ಇದ್ದರು.

ಯುವಕರಿಗೆ ಅವಕಾಶ ಕೊಡಿ

‘ಈಗಾಗಲೇ ಅಧಿಕಾರ ಪಡೆದವರು ಮತ್ತೆ ಸ್ಪರ್ಧೆಗೆ ಮುಂದಾಗದೆ ಯುವಕರಿಗೆ ಸ್ಪರ್ಧಿಸಲು ಅವಕಾಶ ಕೊಡಬೇಕು. ಚಾಮರಾಜನಗರ ಜಿಲ್ಲೆ ಅಂದು ಹೇಗಿತ್ತೋ ಈಗಲೂ ಹಾಗೆಯೇ ಇದೆ. ಅಭಿವೃದ್ಧಿಯಾಗಿಲ್ಲ. ಇಲ್ಲಿ ಹಲವು ಬಾರಿ ಗೆದ್ದವರು ಇನ್ನೂ ಹಿಂದುಳಿದ ಜಿಲ್ಲೆ ಎಂದೇ ಹೇಳುತ್ತಿದ್ದಾರೆ. ಇದು ನಾಚಿಕೆಗೇಡು’ ಎಂದು ಅರ್ಜುನ್ ಹೇಳಿದರು. ‘ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಏಳು ಮಂದಿ ಇರಬಹುದು. ನಾನು ಅವರನ್ನು ನಂಬಿಲ್ಲ. ಚುನಾವಣೆಯಲ್ಲಿ ಮತಕೊಡುವವರು ಜನರು. ಅವರು ನಿರ್ಧಾರ ಮಾಡಿದರೆ ಯಾರಿಗೆ ಏನೂ ಮಾಡುವುದಕ್ಕೆ ಆಗುವುದಿಲ್ಲ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಕೆಲವು ತಪ್ಪುಗಳಾಗಿವೆ. ಅದನ್ನು ಲೋಕಸಭಾ ಚುನಾವಣೆಯಲ್ಲಿ ತಿದ್ದಿಕೊಂಡು ಯುವಕರಿಗೆ ಮಣೆ ಹಾಕಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.