ಗುರುವಾರ, 14 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ರಂಗಭೂಮಿ ಕಲಾವಿದರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ
Published 13 ಆಗಸ್ಟ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಧನ್ಯತಾ ಭಾವ ಉಂಟಾಗಲಿದೆ. ಬಂಧು–ಮಿತ್ರರ ಒಡನಾಟ ಸಂತೋಷ ತರುವುದು. ಅಜೀರ್ಣ ಹಾಗೂ ಪಿತ್ತದ ಸಮಸ್ಯೆಗಳು ಇಂದು ನಿಮ್ಮನ್ನು ಕಾಡುವ ಸಾಧ್ಯತೆಯಿದೆ.
ವೃಷಭ
ಆರ್ಥಿಕ ಸಂಕಷ್ಟದಲ್ಲಿರುವ ನಿಮಗೆ ಸ್ನೇಹಿತನಿಂದ ಸಹಾಯ ಸಿಗಲಿದೆ. ನಿಮ್ಮ ಪ್ರಾಮಾಣಿಕತೆಯನ್ನು ನೋಡಿ ಸಹಾಯ ಮಾಡಿದ್ದಾರೆ ಎಂಬುವುದು ಮರೆಯದಿರಿ. ರಂಗಭೂಮಿ ಕಲಾವಿದರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ.
ಮಿಥುನ
ಭಾವನೆಗಳಿಗೆ ಸ್ಪಂದಿಸುವ ಬಾಳಸಂಗಾತಿ ಸಿಕ್ಕಿರುವ ಬಗ್ಗೆ ಸಂತೋಷವಾಗುವುದು. ಉನ್ನತಾಧಿಕಾರಿಗಳಿಂದ ಪ್ರಶಂಸೆ ಪಡೆಯದಿದ್ದರೂ, ಕೋಪಕ್ಕೆ ಕಾರಣವಾಗಬೇಡಿ. ಸೂರ್ಯ ನಮಸ್ಕಾರದಿಂದ ಆರೋಗ್ಯ ವೃದ್ಧಿ.
ಕರ್ಕಾಟಕ
ಕೆಲವೊಂದು ದುರಭ್ಯಾಸಗಳು ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವುದು ಪ್ರತ್ಯಕ್ಷವಾಗಿ ಗೋಚರವಾಗುತ್ತದೆ. ಹಲವು ದಿನಗಳ ನಿರೀಕ್ಷೆಯ ವಾಹನ ಖರೀದಿ ವಿಚಾರಕ್ಕೆ ಇಂದು ಶುಭಾಂತ್ಯ ದೊರೆಯಲಿದೆ.
ಸಿಂಹ
ಆರಕ್ಷಕ ವರ್ಗದವರು ಜಾಗರೂಕತೆಯಿಂದ ವರ್ತಿಸಿ, ಸ್ವತಃ ನೀವೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದಂತಹ ಸನ್ನಿವೇಶ ಎದುರಾಗಬಹುದು. ಖರ್ಚು ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಲು ಪ್ರಯತ್ನಿಸುವುದು ಉತ್ತಮ.
ಕನ್ಯಾ
ಸಾಹಿತಿಗಳು ಹೊಸ ಪುಸ್ತಕ ಬಿಡುಗಡೆಯ ಬಗ್ಗೆ ಗಮನಹರಿಸಿ. ನಿಮ್ಮ ನೈಪುಣ್ಯವು ವೃದ್ಧಿಸುವ ರೀತಿಯಲ್ಲಿ ನಿಮ್ಮ ವ್ಯಕ್ತಿತ್ವವಿರಲಿ. ನೀವು ನಿರೀಕ್ಷಿಸಿದ ರೀತಿಯಲ್ಲಿ ಹೊಸ ಹೊಸ ವ್ಯಾವಹಾರಿಕ ಸಂಬಂಧಗಳು ಸಿಗಲಿವೆ.
ತುಲಾ
ನಿಮ್ಮ ಸಾಧು ಸ್ವಭಾವ ಮತ್ತು ಪರೋಪಕಾರ ಶತ್ರುಗಳು ಮಿತ್ರರಾಗಿ ಬದಲಾಗುತ್ತಾರೆ. ಮನೆಗೆ ಹೊಸ ರೂಪ ನೀಡುವ ಕುರಿತು ಆಲೋಚನೆ ಬರಲಿದೆ. ಕಷ್ಟಪಟ್ಟು ಕೆಲಸ ಮಾಡಿದರೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ.
ವೃಶ್ಚಿಕ
ಪಾಲುದಾರಿಕೆ ವಿಷಯದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದು ಸರಿ ಎನಿಸಲಿದೆ. ಮನೆಯ ವಿಷಯಗಳತ್ತ ಹೆಚ್ಚಿನ ಗಮನ ಕೊಡಿ. ಸಂದಿಗ್ಧ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸುವುದು ಒಳ್ಳೆಯದು.
ಧನು
ಕುಟುಂಬದ ಗೌರವವನ್ನು ಉಳಿಸುವುದಕ್ಕಾಗಿ ನೀವು ಮಾಡುತ್ತಿರುವ ತ್ಯಾಗವು ಪ್ರಶಂಸನೀಯ. ಗೃಹ ನಿರ್ಮಾಣ ಕಾರ್ಯದ ಆಲೋಚನೆಯು ಕಾರ್ಯರೂಪಕ್ಕೆ ಬರುವುದು. ಎಷ್ಟೇ ತಾಳ್ಮೆ ಹೊಂದಿದ್ದರೂ ಕಡಿಮೆ ಆಗಬಹುದು.
ಮಕರ
ಸಹೋದರರ ಅಥವಾ ದಾಯಾದಿಗಳ ನಡುವಿನ ಭಿನ್ನಾಭಿಪ್ರಾಯನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡಲಿದೆ. ಮಗಳ ಅನಾರೋಗ್ಯವು ಹಂತ ಹಂತವಾಗಿ ಸರಿಯಾಗಿ ಸಮಾಧಾನಕರವೆನ್ನಿಸುವುದು.
ಕುಂಭ
ವೃತ್ತಿರಂಗದಲ್ಲಿ ಹಿತೈಷಿಗಳ ಅಥವಾ ಅಕ್ಕಪಕ್ಕದವರ ಮಾತುಗಳನ್ನು ಲೆಕ್ಕಿಸದೇ ಮುನ್ನುಗ್ಗುವುದು ಈ ದಿನ ಸರಿ ಎನಿಸುವುದು. ಪತ್ರಿಕೋದ್ಯಮಿಗಳು ನಿಮ್ಮ ವಿಷಯಾನ್ವೇಷಣೆಯ ಕೌಶಲವನ್ನು ಮೆಚ್ಚಿ ಗೌರವಕ್ಕೆ ಭಾಗಿಯಾಗುವಿರಿ.
ಮೀನ
ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವವರಿಗೆ ಈ ದಿನ ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ತೊರೆದು ಬಂದ ನಿಮ್ಮ ಮೂಲಮನೆ ಯಲ್ಲಿದ್ದ ಸುವ್ಯವಸ್ಥೆಗಳನ್ನು ನೆನಪಿಸಿಕೊಂಡು ಈಗ ಮರುಗುವಂತಾಗುತ್ತದೆ.
ADVERTISEMENT
ADVERTISEMENT