ಚಾಮರಾಜನಗರ: ಕೇಂದ್ರ ಸರ್ಕಾರ ಸ್ವಾಮ್ಯದ ಬೆಂಗಳೂರಿನ ಅಲಿಮ್ಕೊ ಸಂಸ್ಥೆಯ ನೇತೃತ್ವದಲ್ಲಿ ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ಒದಗಿಸಲಾಗುತ್ತಿದ್ದು ಜಿಲ್ಲೆಯಲ್ಲಿ ತಪಾಸಣಾ ಶಿಬಿರಗಳನ್ನು ಆಯೋಜಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಂಗವಿಕಲರಿಗೆ ಸಾಧನ ಸಲಕರಣೆ ಸೌಲಭ್ಯ ವಿತರಿಸುವ ಸಂಬಂಧ ತಪಾಸಣಾ ಶಿಬಿರ ಏರ್ಪಡಿಸುವ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅಂಗವಿಕಲರನ್ನು ತಪಾಸಣೆಗೊಳಪಡಿಸಿ ಅಗತ್ಯ ಉಪಕರಣಗಳನ್ನು ವಿತರಿಸುವ ಸಂಬಂಧ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳಲ್ಲಿ ತಪಾಸಣಾ ಶಿಬಿರಗಳನ್ನು ಏರ್ಪಡಿಸಬೇಕು. ಶಿಬಿರದಲ್ಲಿ ತಜ್ಞ ವೈದ್ಯರು, ತಾಂತ್ರಿಕ ಸಿಬ್ಬಂದಿ ಭಾಗವಹಿಸಲಿದ್ದು ನೆರವು ನೀಡಲು ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಬೇಕು ಎಂದು ಡಿಎಚ್ಒ ಡಾ.ಎಸ್.ಚಿದಂಬರ ಅವರಿಗೆ ಸೂಚನೆ ನೀಡಿದರು.

‘ತಪಾಸಣಾ ಶಿಬಿರಕ್ಕೆ ಅಗತ್ಯ ಪೀಠೋಪಕರಣ, ಕೊಠಡಿ, ತಪಾಸಣೆಗೆ ವಿಶಾಲ ಸ್ಥಳ ಸಹಿತ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಅಂಗವಿಕಲರು ಶಿಬಿರದ ಸ್ಥಳಕ್ಕೆ ಬರಲು ಹಾಗೂ ತಪಾಸಣೆಯ ನಂತರ ಊರಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಬೇಕು. ಶಿಬಿರಕ್ಕೆ ಬರುವ ಅಂಗವಿಕಲರಿಗೆ ಉಪಾಹಾರ, ಶುದ್ದ ಕುಡಿಯುವ ನೀರು ವ್ಯವಸ್ಥೆ ಮಾಡಬೇಕು, ಅಂಗವಿಕಲರು ಪಾಲ್ಗೊಳ್ಳಲು ಅನುವಾಗುವಂತೆ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ಸಭೆ ನಡೆಸಿ ಫಲಾನುಭವಿಗಳ ಪಟ್ಟಿ ತಯಾರಿಸಬೇಕು’ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

‘ಅಂಗವಿಕಲರು ಮಾತ್ರವಲ್ಲದೆ, 60 ವರ್ಷ ತುಂಬಿದ ಹಿರಿಯರಿಗೆ ಶ್ರವಣ ಸಾಧನ, ನಡಿಗೆಗೆ ಪೂರಕವಾಗಿ ಊರುಗೋಲು ಇತ್ಯಾದಿ ಸೌಲಭ್ಯಗಳನ್ನು ನೀಡಲು ಅವಕಾಶವಿದೆ. ಶ್ರವಣ, ನೇತ್ರ, ದಂತ, ಇತರ ತೊಂದರೆಗಳಿರುವ ಹಿರಿಯ ನಾಗರಿಕರು ಕೂಡ ಶಿಬಿರದಲ್ಲಿ ಭಾಗವಹಿಸಿ ಸೌಲಭ್ಯ ಪಡೆಯಲು ಅನುಕೂಲ ಕಲ್ಪಿಸಿ. ಯುಡಿಐಡಿ ಕಾರ್ಡ್ ವಿತರಣೆ, ಅಂಗವಿಕಲರಿಗೆ ಪಿಂಚಣಿ ಸಹಿತ ಇತರ ಸೌಲಭ್ಯಗಳನ್ನು ನೀಡಲು ಶಿಬಿರದಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.

ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುರೇಶ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮೀನಾಕ್ಷಿ, ಅಲಿಮ್ಕೊ ಸಂಸ್ಥೆಯ ಅಧಿಕಾರಿ ಶಿಲ್ಪಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ.ಸುಧಾ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಜಿಲ್ಲಾ ಕೇಂದ್ರ ತಾಲ್ಲೂಕು ಕೇಂದ್ರಗಳಲ್ಲಿ ತಪಾಸಣಾ ಶಿಬಿರ ಶಿಬಿರದಲ್ಲಿ ತಪಾಸಣೆ ಜೊತೆಗೆ ಅಂಗವಿಕಲರಿಗೆ ಸೌಲಭ್ಯಗಳ ನೋಂದಣಿ ಹಿರಿಯ ನಾಗರಿಕರಿಗೂ ಅಗತ್ಯ ಪರಿಕರಗಳ ವಿತರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.