ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಗುಂಪು ಗಲಾಟೆ ಪ್ರಕರಣ: ಆರು ಮಂದಿ ಪೊಲೀಸ್ ವಶಕ್ಕೆ

ಚಾಮರಾಜನಗರದಲ್ಲಿ ಪೊಲೀಸ್ ಪಥಸಂಚಲನ, ವ್ಹೀಲಿಂಗ್ ವಿರುದ್ಧ ಕಠಿಣ ಕ್ರಮ: ಎಸ್‌ಪಿ ಶಿವಕುಮಾರ್
Last Updated 4 ಸೆಪ್ಟೆಂಬರ್ 2022, 8:16 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಸಂತೇಮರಹಳ್ಳಿ ವೃತ್ತದ ಬಳಿ ಶನಿವಾರ ವ್ಹೀಲಿಂಗ್ ವಿಚಾರವಾಗಿ ಎರಡು ಕೋಮುಗಳ ನಡುವೆ ನಡೆದ ಗಲಾಟೆ ಸಂಬಂಧ ಪೊಲೀಸರು ಆರು ಯುವಕರ ವಿರುದ್ದ ಪ್ರಕರಣ ದಾಖಲಿಸಿ, ವಶಕ್ಕೆ ಪಡೆದಿದ್ದಾರೆ.

ಮಹಮ್ಮದ್ ಅಸ್ಗರ್, ಬಾಬು ಅಶ್ರಫ್, ಅಸ್ಗರ್ ಪಾಷಾ, ಮಹೇಶ್, ಮನೋಜ್ ಮತ್ತು ಸಚಿನ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, 'ಎರಡೂ ಕಡೆಯವರ ತಲಾ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ' ಎಂದರು.

ಡಿ.ಸಿ ಜೊತೆ ಸಭೆ: ಶನಿವಾರದ ಘಟನೆಗೆ ಸಂಬಂಧಿಸಿದಂತೆ ಸೋಮವಾರ ಜಿಲ್ಲಾಧಿಕಾರಿ ಅವರೊಂದಿಗೆ ಸಭೆ ನಡೆಸಲಾಗುವುದು ಎಂದರು.

ವ್ಹೀಲಿಂಗ್ ವಿರುದ್ಧ ಕ್ರಮ: ನಗರದಲ್ಲಿ ಯುವಕರು ವ್ಹೀಲಿಂಗ್ ಮಾಡುತ್ತಿರುವುದು ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಎಸ್ ಪಿ, 'ವ್ಹೀಲಿಂಗ್ ಗೆ ಕಡಿವಾಣ ಹಾಕುವುದಕ್ಕೆ ವಿಶೇಷ ತಂಡ ರಚಿಸಲಾಗುವುದು. ಈಗಾಗಲೇ ಪೊಲೀಸರು ನಿಗಾ ಇಟ್ಟಿದ್ದಾರೆ. ಹಾಗಿದ್ದರೂ ಕೆಲವರು ವ್ಹೀಲಿಂಗ್ ಮಾಡುತ್ತಿದ್ದಾರೆ. ಸೈಕಲ್ ವೀಲ್ಹಿಂಗ್ ನಿಂದಾಗಿ ಶನಿವಾರ ಗಲಾಟೆಯೇ ನಡೆದಿದೆ. ನಗರ ಮಾತ್ರವಲ್ಲದೇ ಇಡೀ‌ ಜಿಲ್ಲೆಯಲ್ಲಿ ಕಡಿವಾಣ ಹಾಕಲಾಗುವುದು' ಎಂದರು.

ಪಥಸಂಚಲನ: ಈ ಮಧ್ಯೆ, ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಸಿಬ್ಬಂದಿ ಭಾನುವಾರ ನಗರದಲ್ಲಿ ಪಥ ಸಂಚಲನ ನಡೆಸಿದರು.

ಎಸ್‌ಪಿ ಟಿ.ಪಿ.ಶಿವಕುಮಾರ್, ಎಎಸ್‌ಪಿ ಸುಂದರ್ ರಾಜ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಡಿವೈಎಸ್‌ಪಿ ಸೋಮಣ್ಣ, ಇನ್‌ಸ್ಪೆಕ್ಟರ್‌ಗಳು, ಸಬ್ ಇನ್‌ಸ್ಪೆಕ್ಟರ್‌ಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT