ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಶಾರ್ಟ್‌ ಸರ್ಕಿಟ್‌ನಿಂದ ಕಬ್ಬು ನಾಶ

Published 1 ಮೇ 2024, 15:35 IST
Last Updated 1 ಮೇ 2024, 15:35 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಗೂಳಿಪುರ ಗ್ರಾಮದ ಸಮೀಪ ಇತ್ತೀಚೆಗೆ ಜಮೀನಿನ ಮಧ್ಯೆ ಹಾದು ಹೋಗಿದ್ದ ವಿದ್ಯುತ್ ತಂತಿಯಲ್ಲಿ ಶಾರ್ಟ್‌ ಸರ್ಕಿಟ್‌ ಉಂಟಾಗಿ ಒಂದು ಎಕರೆ ಕಬ್ಬಿನ ಫಸಲು ಸುಟ್ಟು ಹೋಗಿದೆ.

ತಾಲ್ಲೂಕಿನ ಎಚ್. ಮೂಕಹಳ್ಳಿ ಗ್ರಾಮದ ನಿವಾಸಿ ರಾಜಮ್ಮ ಅವರಿಗೆ ಸೇರಿದ ಜಮೀನಿನಲ್ಲಿ ಈ ಅವಘಡ ನಡೆದಿದೆ. ಗೂಳಿಪುರ ಎಲ್ಲೆಗೆ ಸೇರಿದ ಸರ್ವೆ ನಂಬರ್‌ 22/6ರ ಒಂದು ಎಕರೆ ಪ್ರದೇಶದಲ್ಲಿ ಬೇಸಿಗೆಯ ನಡುವೆ ಕಬ್ಬು ಬೆಳೆದಿದ್ದರು. 

ಶಾರ್ಟ್‌ ಸರ್ಕಿಟ್‌ನಿಂದಾಘಿ ಜಮೀನಿನಲ್ಲಿದ್ದ 40 ತೆಂಗಿನ ಮರ, ನಾಲ್ಕು ತೇಗದ ಮರ, ಡ್ರಿಪ್ ಪೈಪ್, ಕೊಳವೆ ಬಾವಿಗೆ ಅಳವಡಿಸಿದರು ಕೇಬಲ್, ಪೈಪ್, ಹನಿನೀರಾವರಿ ಫಿಲ್ಟರ್ ಸಹ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸೆಸ್ಕ್‌ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ನೊಂದ ರೈತ ಮಹಿಳೆ ರಾಜಮ್ಮ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT