ಚಾಮರಾಜನಗರ: ಗುಬ್ಬಿ ತೋಟದಪ್ಪ ಅವರ ಹೆಸರು ಸಮಾಜ ಸೇವೆ, ದಾನ ಧರ್ಮಗಳ ಮೂಲಕ ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಶರಣೆ ಅಕ್ಕ ಮಹಾದೇವಿ ವಿದ್ಯಾರ್ಥಿನಿಯರ ಹಾಗೂ ಮಹಿಳಾ ಅಭಿವೃದ್ದಿ ಟ್ರಸ್ಟ್ ವತಿಯಿಂದ ನಗರ ಸಮೀಪದ ಕರಿನಂಜನಪುರದಲ್ಲಿ ರಾವ್ ಬಹದ್ದೂರ್ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪನವರ ವೀರಶೈವ ಲಿಂಗಾಯತ ಮಹಿಳಾ ಉಚಿತ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗುಬ್ಬಿ ತೋಟದಪ್ಪನವರು ವಸತಿ ನಿಲಯಗಳನ್ನು ಆರಂಭಿಸಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರು. ತೋಟದಪ್ಪ ಅವರ ದಾನದ ಗುಣವನ್ನು ಮೆಚ್ಚಿ ಅಂದಿನ ಮೈಸೂರು ಒಡೆಯರು ‘ರಾವ್ ಬಹದ್ದೂರ್’ ಬಿರುದು ನೀಡಿ ಗೌರವಿಸಿದ್ದರು. ಬೆಂಗಳೂರಿನಲ್ಲೂ ತೋಟದಪ್ಪವರ ಛತ್ರವನ್ನು ಕಾಣಬಹುದಾಗಿದೆ. ಅವರ ಹೆಸರಿನಲ್ಲಿ ರಾಜ್ಯದಾದ್ಯಂತ ಹೆಣ್ಣು ಮಕ್ಕಳ ಹಾಸ್ಟೆಲ್ಗಳು ನಿರ್ಮಾಣವಾಗಿದ್ದು ಜಿಲ್ಲೆಯಲ್ಲೂ ಸ್ಥಾಪನೆಯಾಗುತ್ತಿರುವುದು ಖುಷಿಯ ವಿಚಾರ ಎಂದರು.

ದಾವಣಗೆರೆ ಕ್ಷೇತ್ರದ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯದಾದ್ಯಂತ ಉಚಿತ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅದ್ಯತೆ ನೀಡಿದ ಗುಬ್ಬಿ ತೋಟದಪ್ಪ ಟ್ರಸ್ಟ್ ಸೇವಾ ಕಾರ್ಯಗಳು ಪ್ರಶಂಸನೀಯ. ವಸತಿ, ಊಟದ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಿ ಸ್ವಾವವಲಂಬಿ ಬದುಕಿಗೆ ಕಾರಣವಾಗಿದೆ. ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಶಾಮನೂರು ಕುಟುಂಬ ಕೂಡ ಸಹಕಾರ ನೀಡಲಿದೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ ಬಾಪೂಜಿ ಟ್ರಸ್ಟ್ ಹಾಗೂ ಶಾಮನೂರು ಶಿವಶಂಕರಪ್ಪ ಅವರೂ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಸಿಇಟಿ ಕೋರ್ಚಿಂಗ್, ಶಿಬಿರ ಹಾಗೂ ಕೌಶಲ ತರಬೇತಿ ಕೇಂದ್ರಗಳನ್ನು ತೆರೆದಿದೆ ಎಂದರು.

ಮಹಿಳೆಯರು ಸುಶಿಕ್ಷಿತರಾದಾಗ ಇಡೀ ಕುಟುಂಬ ಪ್ರಗತಿ ಕಾಣುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಮಹಿಳೆಗೆ ₹2 ಸಾವಿರ ಆರ್ಥಿಕ ನೆರವು ನೀಡುತ್ತಿದ್ದು ಬಹಳಷ್ಟು ಕುಟುಂಬಗಳು ಆರ್ಥಿಕವಾಗಿ ಸಬಲಗೊಂಡಿವೆ. ಸಮಾಜಮುಖಿ ಕಾರ್ಯಗಳಿಗೆ ದುಡಿದ ಹಣವನ್ನು ವಿನಿಯೋಗಿಸಿದರೆ ಪುಣ್ಯ ಬರುವುದರ ಜೊತೆಗೆ ಶರಣರು ಕಂಡ ಸಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಟ್ರಸ್ಟ್ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥಿತ ಹಾಗು ಸುಸಜ್ಜಿತ ಕಟ್ಟಡ ನಿರ್ಮಾಣ ಗುರಿ ಇದ್ದು 17 ಗುಂಟೆ ಜಮೀನು ದಾನವಾಗಿ ದೊರೆತಿದೆ. ದಾನಿಗಳ ನೆರವಿನೊಂದಿಗೆ ಕಟ್ಟಡ ನಿರ್ಮಾಣ ಗುರಿ ಹೊಂದಲಾಗಿದೆ. ಸುತ್ತೂರು ಶ್ರೀಗಳ ಮಾರ್ಗದರ್ಶನ ಇದೆ ಎಂದರು.

ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿಲಯದ ರಾಜ್ಯಾಧ್ಯಕ್ಷ ರೇವಣ್ಣ ಸಿದ್ದಯ್ಯ ಮಾತನಾಡಿದರು. ವೇದಿಕೆಯಲ್ಲಿ ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ನಗರ ಮಠದ ಚನ್ನಬಸವ ಸ್ವಾಮೀಜಿ, ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಗರಸಭೆ ಅಧ್ಯಕ್ಷ ಸುರೇಶ್, ಪೌರಾಯುಕ್ತ ರಾಮದಾಸ್, ಉದ್ಯಮಿ ನಿಶಾಂತ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ನಗರಸಭಾ ಸದಸ್ಯ ಮನೋಜ್ ಪಟೇಲ್, ನಿವೇಶನ ದಾನಿಗಳಾದ ಪಿ. ವಿಜಯಾಂಬ ಮತ್ತು ಎಚ್.ಜಿ. ಕುಮಾರಸ್ವಾಮಿ, ರೂಪ ಎಚ್.ಜಿ. ಮಹದೇವಪ್ರಸಾದ್, ಟ್ರಸ್ಟ್ನ ಎ.ಎಂ.ಗುರುಸ್ವಾಮಿ, ಗೌಡಿಕೆ ನಾಗೇಶ್, ಆರ್.ಪುಟ್ಟಮಲ್ಲಪ್ಪ, ಶಿವಪ್ರಸಾದ್ ಇದ್ದರು.

ಸಂಸ್ಕಾರಯುತ ಶಿಕ್ಷಣ

ಸಿದ್ದಗಂಗಾ ಶ್ರೀಗಳು ಮಾಜಿ ಮುಖ್ಯಮಂತ್ರಿ ದಿ.ನಿಜಲಿಂಗಪ್ಪ ಗುಬ್ಬಿ ತೋಟದಪ್ಪ ವಸತಿಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಸಮಾಜಕ್ಕೆ ಮಾದರಿ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಗುಬ್ಬಿ ತೋಟದಪ್ಪ ಶಿಕ್ಷಣ ಸಂಸ್ಥೆಯ ಶ್ರಮ ಹೆಚ್ಚಿದೆ. ಸಮಾಜದ ಉದ್ಧಾರಕ್ಕಾಗಿ ಎಲ್ಲ ಸಂಪತ್ತನ್ನು ವಿನಿಯೋಗ ಮಾಡಿದ ಫಲವಾಗಿ ಇಂದಿಗೂ ಅವರ ಹೆಸರು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದು ಅವರ ಸಮಾಜ ಸೇವಾ ಕಾರ್ಯಗಳು ಆದರ್ಶಗಳು ಸಮಾಜಕ್ಕೆ ಸ್ಫೂರ್ತಿಯಾಗಲಿ ಎಂದು ಸುತ್ತೂರು ಶ್ರೀಗಳು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.