ಕ್ಷೇತ್ರಕ್ಕೆ ಉತ್ತಮ ರಸ್ತೆ ನಿರ್ಮಾಣ: ಸಚಿವ ಮಹದೇವಪ್ಪ | ‘ಜಾತಿಬೇಧ ಇಲ್ಲದೆ ಆಚರಿಸುವ ಚಿಕ್ಕಲ್ಲೂರು ಜಾತ್ರೆ’ | ಹುಲಿ ವಾಹನೋತ್ಸವಕ್ಕೆ ಭಕ್ತರ ದಂಡು

ಕೊಳ್ಳೇಗಾಲ: ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಭಾನುವಾರ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ವಿಶೇಷ ಪೂಜೆಯಲ್ಲಿ ಭಾಗಿಯಾದರು.

ಜಿಲ್ಲೆ, ಹೊರ ಜಿಲ್ಲೆಗಳಿಂದ ಜಾತ್ರೆಗೆ ಬಂದಿದ್ದ ಭಕ್ತರ ಜೊತೆ ಮಾತನಾಡಿದ ಸಚಿವರು, ‘ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿ, ‘ಜಾತ್ರೆ ಆವರಣದ ಸುತ್ತಮುತ್ತಲಿನ ಕೃಷಿ ಭೂಮಿಯಲ್ಲಿ ಲಕ್ಷಾಂತರ ಭಕ್ತರು ಮಾಂಸದೂಟ ಹಾಗೂ ಸಸ್ಯಾಹಾರ ಸೇವನೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆಹಾರ ಪದ್ಧತಿ ಜನರ ಹಕ್ಕಾಗಿದ್ದು, ಇಚ್ಛೆಯ ಆಹಾರ ಸೇವಿಸಲು ಅವಕಾಶವಿದೆ. ಆಹಾರದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ಚಿಕ್ಕಲ್ಲೂರು ಜಾತ್ರೆಯ ಆವರಣದಲ್ಲಿ ಪ್ರಾಣಿ ಬಲಿ ಪೀಠ ಇಲ್ಲ. ಜಾತ್ರೆಯ ಆವರಣದಲ್ಲಿ ಕಜ್ಜಾಯ ಪಾಯಸ ಮಾಡುವವರು ದೇವರಿಗೆ ಎಡೆ ಹಾಕುತ್ತಾರೆ, ಮಾಂಸಾಹಾರ ತಯಾರಿಸುವವರು ಸಹ ಎಡೆ ಅರ್ಪಿಸುತ್ತಾರೆ. ಜಾತ್ರೆಯಲ್ಲಿ ಜಾತಿ, ಮತ ಭೇದ ಇರುವುದಿಲ್ಲ. ಎಲ್ಲರೂ ಒಂದೇ ಎಂಬ ಭಾವವನ್ನು ಚಿಕ್ಕಲ್ಲೂರು ಜಾತ್ರೆ ಮೂಡಿಸುತ್ತದೆ’ ಎಂದರು.

‘12ನೇ ಶತಮಾನದಲ್ಲಿ ಬಸವಾದಿ ಶರಣರು, 15 ಹಾಗೂ 16ನೇ ಶತಮಾನದಲ್ಲಿ ಸಿದ್ದಪ್ಪಾಜಿ, ರಾಚಪ್ಪಾಜಿ, ಮಂಟೇಸ್ವಾಮಿ ಸಮಾಜ ಸುಧಾರಣೆಯ ಆಶಯಗಳನ್ನು ಸಾರಿದ್ದಾರೆ. ಬಸವಣ್ಣನವರ ಸಾಮಾಜಿಕ ಚಳವಳಿಯ ಹೊರಣ ನೀಲಗಾರರ ಪರಂಪರೆಯಲ್ಲಿ ಅಡಗಿದೆ. ಶರಣರು, ನೀಲಗಾರರು ಆರಂಭಿಸಿದ ಚಳವಳಿಯ ಕಿಡಿ ಆರದಂತೆ ನೋಡಿಕೊಳ್ಳಬೇಕು. ಚಿಕ್ಕಲೂರು ಕ್ಷೇತ್ರವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿ, ದ್ವಿಪಥ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು’ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಮಾಜಿ ಶಾಸಕ ನರೇಂದ್ರ, ಸಾಹಿತಿ ಶಂಕನಪುರ ಮಹದೇವ, ಮಂಟೇಸ್ವಾಮಿ ಪರಂಪರೆ ಹೋರಾಟ ಸಮಿತಿ ಅಧ್ಯಕ್ಷ ಉಗ್ರನರಸಿಂಹೇ ಗೌಡ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಮುಖಂಡ ವೆಂಕಟರಮಣ ಸ್ವಾಮಿ, ಕಮಲ್, ಕೊಪ್ಪಳ್ಳಿ ಮಹದೇವ ನಾಯಕ, ರಾಚಯ್ಯ, ಮುಕುಂದ ವರ್ಮ ಹಾಜರಿದ್ದರು.

‘2028ರವರೆ ಸರ್ಕಾರ ಸುಭದ್ರ’

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದು ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಜನರು ಐದು ವರ್ಷ ಆಡಳಿತ ನಡೆಸಲು ಕಾಂಗ್ರೆಸ್ಗೆ ಅವಕಾಶ ನೀಡಿದ್ದು ಜನಾಶಯದಂತೆ 2028ರವರೆಗೆ ಸರ್ಕಾರ ಮುಂದುವರಿಯುತ್ತದೆ. ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರದಲ್ಲಿ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಜನರ ಪ್ರಾಣ ಮಾನ ಆಸ್ತಿ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಲಾಗುವುದು. ಇಂತಹ ಘಟನೆಗಳು ನಡೆದಾಗ ರಾಜಕಾರಣಿಗಳು ಜನಪ್ರತಿನಿಧಿಗಳು ಶಾಂತಿ ಕಾಪಾಡುವ ಕೆಲಸ ಮಾಡಬೇಕು’ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.

‘ಪ್ರಾಧಿಕಾರ ರಚನೆ: ಸಮಿತಿಯಲ್ಲಿ ಚರ್ಚೆ’

‘ಚಿಕ್ಕಲ್ಲೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಮೂಲ ಸೌಕರ್ಯಗಳು ಸಿಗುತ್ತವೆ. ಪ್ರಾಧಿಕಾರದ ರಚನೆಯಿಂದ ಯಾರ ಆಸ್ತಿಯನ್ನೂ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಬದಲಾಗಿ ಕ್ಷೇತ್ರ ಅಭಿವೃದ್ಧಿಯಾಗುತ್ತದೆ’ ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು. ಈಗಾಗಲೇ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ಸಹಿತ ರಾಜ್ಯದ ಹಲವು ಕಡೆಗಳಲ್ಲಿ ಪ್ರಾಧಿಕಾರಗಳನ್ನು ರಚನೆ ಮಾಡಲಾಗಿದ್ದು ಸಂಬಂಧಪಟ್ಟ ಕ್ಷೇತ್ರಗಳು ಅಭಿವೃದ್ಧಿಯಾಗಿವೆ. ಮುಂದೆ ಪ್ರಗತಿಪರ ಚಿಂತಕರು ಹೋರಾಟಗಾರರನ್ನೊಳಗೊಂಡ ಸಮಿತಿಯಲ್ಲಿ ಪ್ರಾಧಿಕಾರ ರಚನೆ ಕುರಿತು ಚರ್ಚಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.