ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಬುಕ್ಕಿಂಗ್‌ ರದ್ದಿನಿಂದಾಗಿ ಕಾರ್ಮಿಕರ ಬದುಕು ಬೀದಿಪಾಲು

ಮೂಲೆಯಲ್ಲಿ ಬಿದ್ದ ಅಲಂಕಾರಿಕ ಸಾಮಗ್ರಿ: ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ
Last Updated 30 ಮೇ 2020, 21:54 IST
ಅಕ್ಷರ ಗಾತ್ರ

ಯಳಂದೂರು: ಸರ್ಕಾರಿ ಕಾರ್ಯಕ್ರಮಗಳು, ಮದುವೆ, ಗೃಹ ಪ್ರವೇಶ, ಹುಟ್ಟುಹಬ್ಬ ಸಂಭ್ರಮದ ಕಳೆಹೆಚ್ಚಿಸುತ್ತಿದ್ದ ಅಲಂಕಾರಿಕಾ ಸಾಮಗ್ರಿಗಳನ್ನು ಈಗ ಕೇಳುವವರು ಇಲ್ಲ. ಲಾಕ್‌ಡೌನ್‌ನಂತರ ಶುಭ ಸಮಾರಂಭಗಳಲ್ಲಿ ಜನ ಸೇರುವುದಕ್ಕೆ ಸರ್ಕಾರ ಮಿತಿ ಹೇರಿರುವುದರಿಂದ ಅಲಂಕಾರ ಮಾಡುವ ಕಸುಬನ್ನೇ‌ನಂಬಿ ಬದುಕುತ್ತಿದ್ದ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ.

ಹತ್ತಾರು ಸರ್ಕಾರಿ ಕಾರ್ಯಕ್ರಮ, ಮಹಾತ್ಮರ ಜಯಂತಿಗಳು ರದ್ದಾಗಿವೆ. ಖಾಸಗಿಆಚರಣೆಗಳು ಹೇಗೋ ನಡೆಯುತ್ತಿವೆ. ಇವೆಲ್ಲಕ್ಕೂ ಬಳಕೆ ಆಗುತ್ತಿದ್ದ ಬಣ್ಣ ಬಣ್ಣದಲೈಟ್‌, ದೇವರ ವಿಗ್ರಹ, ಸುವಾಸನೆ ದ್ರವವನ್ನು ಚಿಮುಕಿಸುತ್ತಿದ್ದ ಯಂತ್ರ, ಮೆತ್ತನೆಯ ಕುರ್ಚಿ... ಮೊದಲಾದ ವಸ್ತುಗಳಿಗೆ ಮುಂಗಡ ನೀಡಿದ್ದ ಗ್ರಾಹಕರು ಒಪ್ಪಂದವನ್ನು ರದ್ದು ಮಾಡಿದ್ದಾರೆ.

ಕೆಲಸ ಇಲ್ಲದಿದ್ದರೂಕಾರ್ಮಿಕರಿಗೆ ತಿಂಗಳ ವೇತನ ನೀಡಬೇಕು. ಪ್ರತಿದಿನ ಊಟ, ತಿಂಡಿಖರ್ಚು ನೀಡಬೇಕು. ಆಟೊ ಮತ್ತು ಚಾಲಕರನ್ನು ಸಂಬಾಳಿಸಬೇಕು. ಮೂಲೆಯಲ್ಲಿ ದೂಳುತಿನ್ನುತ್ತಿರುವ ಅಲಂಕಾರಿಕ ಸಾಮಗ್ರಿ ಮತ್ತು ಪೀಠೋಪಕರಣಗಳನ್ನು ಇಲಿ, ಹೆಗ್ಗಣಗಳಿಂದಸಂರಕ್ಷಿಸುವುದು ಈಗ ಮಾಲೀಕರಿಗೆ ಆರ್ಥಿಕ ಸಂಕಷ್ಟವನ್ನು ಹೆಚ್ಚಿಸಿದೆ.

‘ತಾಲ್ಲೂಕಿನಲ್ಲಿ ಮಾರ್ಚ್‌–ಏಪ್ರಿಲ್‌ ನಡುವೆ ಏನಿಲ್ಲವೆಂದರೂ ನೂರಾರುಕಾರ್ಯಕ್ರಮಗಳಿಗೆ ಅಗತ್ಯವಾದ ಪರಿಕರಗಳಿಗೆ ಬೇಡಿಕೆ ಇರುತ್ತಿತ್ತು. ಪಾತ್ರೆ ಪಡಗ‌, ಶಾಮಿಯಾನ, ವೇದಿಕೆ ಸಿಂಗಾರಕ್ಕೆ ಬಳಕೆ ಆಗುವ ಹೂ, ನಾಮಫಲಕ ಮತ್ತಿತರ ವಸ್ತುಗಳಿಗೆಬೇಡಿಕೆ ಇರುತ್ತಿತ್ತು. ಇದನ್ನು ಪೂರೈಸುವ ಕಾರ್ಮಿಕರಿಗೆ ಪ್ರತಿ ದಿನ ಕೆಲಸಸಿಗುತ್ತಿತ್ತು. ಇವೆಲ್ಲಕ್ಕೂ ಈಗ ಬ್ರೇಕ್‌ ಬಿದ್ದಿದೆ’ ಎಂದು ಪಟ್ಟಣದಶಾಮಿಯಾನ ಮಾಲೀಕ ಜೆ ಶ್ರೀನಿವಾಸ್‌ ರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಕ್‌ಡೌನ್‌ ನಂತರ ಬದಲಾದ ಜೀವನಶೈಲಿ ಮತ್ತು ಸರ್ಕಾರ ಹೇರಿರುವ ನಿರ್ಬಂಧಗಳು ಜನ ಸಂಚಾರಮತ್ತು ಗುಂಪು ಗೂಡುವಿಕೆಗೆ ಮಿತಿ ಹೇರಿದೆ. ಇದರಿಂದ ಮುಂಗಡ ನೀಡಿದವರು ಬುಕ್ಕಿಂಗ್‌ ರದ್ದುಮಾಡಿದ್ದಾರೆ. ಹಣವನ್ನು ವಾಪಸ್‌ ಮಾಡುವಂತೆ ಒತ್ತಾಯಿಸುತ್ತಾರೆ. ವ್ಯವಹಾರ ಇಲ್ಲದೆಇರುವುದರಿಂದ ಬಾಡಿಗೆ ಕಟ್ಟುವುದೂ ಸವಾಲಾಗಿದೆ.ಮೂರು ತಿಂಗಳಿಂದ ಕನಿಷ್ಠ ₹5ಲಕ್ಷ ನಷ್ಟವಾಗಿದೆ’ ಎಂದು ಅವರು ಹೇಳಿದರು.

‘ಗ್ರಾಹಕರು 50 ಚೇರ್‌, 2 ಮಹಾರಾಜ ಕುರ್ಚಿ, 10 ಸೀರಿಯಲ್‌ ಸರ, ಒಂದಿಷ್ಟು ಅಡಿಗೆಸಾಮಾನುಗಳಿಗೆ ಬೇಡಿಕೆ ಸಲ್ಲಿಸುತ್ತಾರೆ. ಇದೇ ವೇಳೆ ಅಧಿಕಾರಿಗಳು ಜನ ಗುಂಪುಗೂಡುವವರನ್ನು ಗಮನಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದರೆ ನಮ್ಮ ವಸ್ತುಗಳಸಮೇತ ಕೇಸ್‌ ದಾಖಲಿಸುತ್ತಾರೆ. ಇದರಿಂದ ಮತ್ತೆ ನಷ್ಟದ ಹೊರೆ ಅಂಗಡಿ ಮಾಲೀಕರ ಮೇಲೆಬೀಳುತ್ತದೆ. ಹೀಗಾಗಿ, ಆರ್ಡರ್‌ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದೇವೆ’ ಎಂದು ಬಹುತೇಕ ಮಾಲೀಕರು ನೋವು ತೋಡಿಕೊಂಡರು.

ಕುಟುಂಬ ನಿರ್ವಹಣೆ ಸವಾಲಾಗಿದೆ

ಗ್ರಾಹಕರಿಂದ ಶಾಮಿಯಾನ, ಅಲಂಕಾರಿಕ ವಸ್ತುಗಳಿಗೆ ಬೇಡಿಕೆ ಇಲ್ಲದಿರುವುದರು ಮಾಲೀಕರಿಗೆ ಮಾತ್ರವಲ್ಲ, ಕಾರ್ಮಿಕರಿಗೂ ಸಂಕಷ್ಟು ತಂದೊಟ್ಟಿದೆ.

‘ಮೂರು ತಿಂಗಳುಗಳಿಂದಕೆಲಸ ಇಲ್ಲ. ಸಮಯದ ಮಿತಿಗೆ ಒಳಪಟ್ಟು ಅಂಗಡಿಗಳು ತೆರೆದಿರುತ್ತವೆ. ಆದರೆ,ಮೊದಲಿನಂತೆ ಗ್ರಾಮೀಣ ಭಾಗಗಳಿಂದ ಬೇಡಿಕೆ ಬರುತ್ತಿಲ್ಲ. ಮನೆಗಳಲ್ಲಿ ಸರಳವಾಗಿಕಾರ್ಯಕ್ರಮಗಳನ್ನು ಆಚರಿಸುತ್ತಾರೆ. ಕೆಲವರು ದೇವಾಲಯಗಳಲ್ಲಿ ಸೇರುತ್ತಾರೆ. ಸಂಬಳದ ಹೊರತುಪಡಿಸಿ ಹೆಚ್ಚುವರಿಯಾಗಿ ದೊರೆಯುತ್ತಿದ್ದ ಚಿಲ್ಲರೆ ಹಣ ಕೈಸೇರುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಮಾಡುವುದು ಸವಾಲಾಗಿದೆ’ಕಾರ್ಮಿಕರಾದ ಗಿರಿ, ಮಲ್ಲು ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT