ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಅವಧಿಯಲ್ಲಿ 62 ದಿನ ಅನ್ನದಾತನಾದ ಸಂಘಟನೆ

ಯುವ ಸೇನೆ ಕರ್ನಾಟಕ ಸೇವಾ ಸಂಘದಿಂದ ಉಚಿತ ಊಟ ಪೂರೈಕೆ
Last Updated 9 ಜುಲೈ 2021, 17:09 IST
ಅಕ್ಷರ ಗಾತ್ರ

ಚಾಮರಾಜನಗರ: ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ, ನಿರಾಶ್ರಿತರಿಗೆ ಹಾಗೂ ನಿರ್ಗತಿಕರಿಗೆ ಸತತ 62 ದಿನಗಳ ಕಾಲ ಉಚಿತವಾಗಿ ಆಹಾರ ಪೂರೈಸಿದ ನಗರದ ಯುವ ಸೇನೆ ಕರ್ನಾಟಕ ಸೇವಾ ಸಂಘವು ಶುಕ್ರವಾರ ತನ್ನ ಸೇವಾ ಕಾರ್ಯವನ್ನು ಅಂತ್ಯಗೊಳಿಸಿದೆ.

ಜಿಲ್ಲಾಡಳಿತವು ಲಾಕ್‌ಡೌನ್‌ ನಿಯಮಗಳನ್ನು ಬಹುತೇಕ ತೆರವುಗೊಳಿಸಿರುವುದರಿಂದ ಸಂಘಟನೆಯು ತನ್ನ ಮಾದರಿ ಕಾರ್ಯವನ್ನು ಕೊನೆಗೊಳಿಸಿದೆ. ಸಂಘದ ಪ‍ದಾಧಿಕಾರಿಗಳು ಕೊನೆಯ ದಿನದಂದು ನಗರಸಭೆಯ ಪೌರಕಾರ್ಮಿಕರಿಗೆ ಊಟದ ಪೊಟ್ಟಣ ವಿತರಿಸಿ ಕೃತಜ್ಞತೆ ಸಲ್ಲಿಸಿದರು.

ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ನಮ್ಮನೆ ಪ್ರಶಾಂತ್ ಅವರು ಮಾತನಾಡಿ, ಕೋವಿಡ್‌ 2ನೇ ಅಲೆಯ ಪ್ರಾರಂಭದಿಂದಲೂ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ ಹಾಗೂ ರೋಗಿಗಳ ಸಂಬಂಧಿಕರಿಗೆ ಹಾಗೂ ನಿರಾಶ್ರಿತರಿಗೆ ನಿರ್ಗತಿಕರಿಗೆ ಬಡವರಿಗೆ ಊಟ ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದೇವೆ. ಆಸ್ಪತ್ರೆಯ ಆವರಣದಲ್ಲಿ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿ ಅದಕ್ಕೆ ಫಿಲ್ಟರ್ ವಾಟರ್ ತುಂಬಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಗಿದೆ’ ಎಂದರು.

‘ಪ್ರತಿಯೊಬ್ಬರೂ ಕೋವಿಡ್‌ ಲಸಿಕೆ ಪಡೆದು ಕೋವಿಡ್‌ನಿಂದ ಜಿಲ್ಲೆ, ರಾಜ್ಯ ಹಾಗೂ ದೇಶವನ್ನು ಮುಕ್ತ ಮಾಡಬೇಕು’ ಎಂದು ಮನವಿ ಮಾಡಿದರು.

ವಕೀಲರಾದ ಬಿ.ಪ್ರಸನ್ನ ಕುಮಾರ್, ದೇವರಾಜ, ಸಿವಿಲ್ ಗುತ್ತಿಗೆದಾರ ಮಣಿಕಂಠ, ಸಿದ್ದಪ್ಪಾಜಿ ಟೈಲರ್ ಪ್ರಸನ್ನ, ಅಡುಗೆ ಭಟ್ಟರಾದ ವಿಜಯ್ ಮತ್ತು ವಿನಯ್, ಎಸ್‌ಡಿಪಿಐನ ಸಮೀಉಲ್ಲಾ ಹಾಗೂ ಇನ್ನಿತರರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಇವರನ್ನು ಕಂಡು ಪ್ರೇರಣೆಗೊಂಡು ಬೇರೆಯವರೂ ಅವರ ಜೊತೆ ಕೈಜೋಡಿಸಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಹೋಟೆಲ್‌ಗಳಲ್ಲಿ ಪಾರ್ಸೆಲ್‌ ವ್ಯವಸ್ಥೆ ಇದ್ದರೂ, ಎಲ್ಲ ಹೋಟೆಲ್‌ಗಳು ತೆರೆದಿರಲಿಲ್ಲ. ಬಡ ರೋಗಿಗಳ ಕುಟುಂಬದವರಿಗೆ ಹಣಕಾಸಿನ ಸಮಸ್ಯೆಯೂ ತಲೆ ದೋರಿತ್ತು. ಈ ಸಂದರ್ಭದಲ್ಲಿ ಸೇವಾ ಸಂಘ ಉಚಿತ ಊಟ ಪೂರೈಸಿದ್ದು ನೂರಾರು ಜನರಿಗೆ ಪ್ರಯೋಜನವಾಗಿದ್ದು, ಸಂಘದ ಕೆಲಸಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.

ಕಾರ್ಯಕ್ರಮದಲ್ಲಿ ನಗರಸಭೆಯ ಆಯುಕ್ತ ಕರಿಬಸವಯ್ಯ, ವಕೀಲರಾದ ಪ್ರಸನ್ನಕುಮಾರ್, ಮಣಿಕಂಠ, ವಿನಯ, ದೇವರಾಜ, ಸಮೀಉಲ್ಲಾ, ಸುರೇಶ್ ವಾಜಪೇಯಿ ಇತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT