ಟೈಫಾಯ್ಡ್, ಜ್ವರ, ಮಲೇರಿಯ, ಹಂದಿಜ್ವರ, ಚಿಕೂನ್‌ಗುನ್ಯಾಗಳಿಗಿಂತ ಕೋವಿಡ್ ದೊಡ್ಡದಲ್ಲ. ಸಣ್ಣ ವೈರಾಣುವಿನಿಂದ ಬರುವ ಈ ಕಾಯಿಲೆ ಮಾರಣಾಂತಿಕ ಅಲ್ಲ. ಈ ಕಾಯಿಲೆಯನ್ನು ದೊಡ್ಡದಾಗಿ ಬಿಂಬಿಸುವ ಕೆಲಸವನ್ನು ಯಾರೂ ಮಾಡಬಾರದು. ಸಾಧ್ಯವಾದರೆ, ಅನವಶ್ಯಕ ಭೀತಿ ಹುಟ್ಟಿಸುವ ವಾಟ್ಸ್ಆ್ಯಪ್ ಸಂದೇಶ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವ ಋಣಾತ್ಮಕ ವಿಷಯಗಳಿಂದ ದೂರ ಇರಿ ಎಂದು ಸಲಹೆ ನೀಡುತ್ತಾರೆ ಸೋಂಕು ಮುಕ್ತರಾಗಿರುವ ಮೋಹನ್ ಕಲ್ಕುಣಿ ಅವರು.

ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ನಮ್ಮ ಲ್ಯಾಬ್‌ಗೆ ಬೇಟಿ ಭೇಟಿ ನೀಡಿದ್ದರ ಬಗ್ಗೆಗೊತ್ತಾಯಿತು. ತಕ್ಷಣ ಕರ್ತವ್ಯ ನಿರ್ಹಹಿಸುತ್ತಿದ್ದ ನಾನು ನನ್ನ ಗಂಟಲು ದ್ರವವನ್ನುತಪಾಸಣೆಗೆ ಕಳುಹಿಸಿದೆ. ನನಗೂ ಕೊರೊನಾ ಪಾಸಿಟಿವ್ ಇರುವುದು ತಿಳಿಯಿತು. ನಂತರಕೊವಿಡ್ ಆಸ್ಪತ್ರೆಗೆ ದಾಖಲಾದೆ.

ಟೈಫಾಯ್ಡ್, ಜ್ವರ, ಮಲೇರಿಯ, ಹಂದಿಜ್ವರ, ಚಿಕೂನ್‌ಗುನ್ಯಾಗಳಿಗಿಂತ ಕೋವಿಡ್‌ದೊಡ್ಡದಲ್ಲ. ಸಣ್ಣ ವೈರಾಣುವಿನಿಂದ ಬರುವ ಈ ಕಾಯಿಲೆ ಮಾರಣಾಂತಿಕ ಅಲ್ಲ. ಆಸ್ಪತ್ರೆಯಲ್ಲಿ ಹೆಚ್ಚಿನ ಸೋಂಕಿತರಆರಾಮವಾಗಿ, ನಗುಮುಖದಿಂದಲೇ ಇರುತ್ತಾರೆ.

ಈ ಕಾಯಿಲೆಯನ್ನು ದೊಡ್ಡದಾಗಿ ಬಿಂಬಿಸುವ ಕೆಲಸವನ್ನು ಯಾರೂ ಮಾಡಬಾರದು. ಸಾಧ್ಯವಾದರೆ, ಅನವಶ್ಯಕ ಭೀತಿ ಹುಟ್ಟಿಸುವ ವಾಟ್ಸ್ಆ್ಯಪ್ ಸಂದೇಶ ಮತ್ತು ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾಗುವ ಋಣಾತ್ಮಕ ವಿಷಯಗಳಿಂದ ದೂರ ಇರಿ.

ಸೋಂಕಿತರನ್ನು ಕಾಣುವ ದೃಷ್ಟಿಕೋನ ಬದಲಾಗಬೇಕು. ಅವರಲ್ಲಿ ಧೈರ್ಯ ತುಂಬುವಕೆಲಸ ಆಗಬೇಕು. ಭಯದಲ್ಲಿ ಬದುಕುವುದನ್ನು ಬಿಡಬೇಕು. ಹಲವು ಕಾಯಿಲೆಗಳಿಂದಬಳಲುತ್ತಿರುವವರು ಮಾತ್ರ ಎಚ್ಚರಿಕೆಯಿಂದ ಇರಬೇಕು. ಆರೋಗ್ಯವಂತರು ಮಾಸ್ಕ್ ಮತ್ತು ದೈಹಿಕ ಅಂತರ ಕಾಯ್ದುಕೊಂಡು ಜಾಗ್ರತೆ ವಹಿಸಿದರೆ ಸಾಕು. ರೋಗ ಲಕ್ಷಣ ತೋರಿಸದೆಯೇ ವೈರಸ್ ತಾನಾಗಿ ದೇಹದಿಂದ ಹೋಗಿರುತ್ತದೆ. ಇದಕ್ಕೆ ನಾನೇ ಸಾಕ್ಷಿ.

ಆಸ್ಪತ್ರೆಯಲ್ಲಿ ವಿಟಮಿನ್, ತಲೆ ನೋವು, ಜ್ವರ ಮಾತ್ರೆಗಳನ್ನು ಕೊಟ್ಟರು. ಚುಚ್ಚುಮದ್ದಿನ ಅಗತ್ಯ ಇಲ್ಲ.ಪ್ರತಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ನೀಡಿದರು. ಬೆಳಿಗ್ಗೆ ಮತ್ತು ಸಂಜೆ ಕಾಫಿ, ಚಹ ನೀಡುತ್ತಾರೆ. ಇಡ್ಲಿ, ವಡೆ, ಉಪ್ಪಿಟ್ಟು, ಮೊದಲಾದ ಉಪಾಹಾರ ನೀಡುತ್ತಾರೆ. ಮಧ್ಯಾಹ್ನಮತ್ತು ರಾತ್ರಿ ಚಪಾತಿ, ಅನ್ನ ಸಾರು, ಮೊಟ್ಟೆ ನೀಡುತ್ತಾರೆ. ಹಾಸಿಗೆಗಳನ್ನೆಲ್ಲ ಸ್ವಚ್ಛವಾಗಿಟ್ಟಿದ್ದಾರೆ.

ಗಂಟಲು ದ್ರವ ಸಂಗ್ರಹ ಹಾಗೂ ಇನ್ನಿತರ ತಪಾಸಣೆಗಾಗಿ ಹೆಚ್ಚು ಜನರು ಏಕ ಕಾಲದಲ್ಲಿ ಆಸ್ಪತ್ರೆಗೆತೆರಳುವುದು ಬೇಡ. ಅವರಿದ್ದ ಸ್ಥಳದಲ್ಲಿ ತಪಾಸಣೆ ನಡೆಸಿದರೆ ಸೋಂಕು ಹರಡುವುದನ್ನು ಸುಲಭವಾಗಿ ತಡೆಗಟ್ಟಬಹುದು.

ನಿರೂಪಣೆ: ನಾ.ಮಂಜುನಾಥಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.